ಬಾಂಗ್ಲಾ ಟೈಗರ್ಸ್ ಬೇಟೆಗೆ ಟೀಮ್ ಇಂಡಿಯಾದ ಸಮರಾಭ್ಯಾಸ ಶುರುವಾಗಿದೆ. ಚೆಪಾಕ್ ಅಂಗಳದಲ್ಲಿ ಟೀಮ್ ಇಂಡಿಯಾದ ಕ್ಯಾಂಪ್ ಒಂದೆಡೆ ಆರಂಭವಾಗಿದ್ರೆ, ಇನ್ನೊಂದೆಡೆ ಹೆಡ್ ಕೋಚ್ ಗೌತಮ್ ಗಂಭೀರ್ ಎದೆಯಲ್ಲಿ ಢವ ಢವ ಶುರುವಾಗಿದೆ. ಕೇಳಿದ್ದನ್ನೆಲ್ಲಾ ಪಡೆದು ಟೀಮ್ ಇಂಡಿಯಾದ ಪವರ್ ಫುಲ್ ಹುದ್ದೆಗೇರಿರುವ ಗಂಭೀರ್ಗೆ ಈಗ ರಿಯಲ್ ಟೆಸ್ಟ್ ಆರಂಭವಾಗಿದೆ. 10 ತಿಂಗಳು, 1 ಟ್ರೋಫಿ, ಪಾಸಾದ್ರೆ ಓಕೆ. ಫೇಲಾದ್ರೆ, ಗುರು ಗಂಭೀರ್ ಭವಿಷ್ಯ ಅತಂತ್ರಕ್ಕೆ ಸಿಲುಕಲಿದೆ.
ಇಂಡೋ- ಬಾಂಗ್ಲಾ ಟೆಸ್ಟ್ ಸರಣಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಸಪ್ಟೆಂಬರ್ 19ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಚೆಪಾಕ್ನಲ್ಲಿ ಟೀಮ್ ಇಂಡಿಯಾದ ಶಸ್ತ್ರಾಭ್ಯಾಸ ಶುರುವಾಗಿದೆ. ಮೊದಲೇ ನಿಗದಿಯಾದಂತೆ ನಿನ್ನೆಯಿಂದ ಟೀಮ್ ಇಂಡಿಯಾದ ಸ್ಪೆಷಲ್ ಕ್ಯಾಂಪ್ ಆರಂಭವಾಗಿದ್ದು, ಆಟಗಾರರೆಲ್ಲಾ ಅಭ್ಯಾಸದ ಅಖಾಡಕ್ಕೆ ಮರಳಿದ್ದಾರೆ. ಹೆಡ್ ಕೋಚ್ ಗೌತಮ್ ಗಂಭೀರ್ & ಸಪೋರ್ಟ್ ಸ್ಟಾಫ್ ಟೀಂ ಅಭ್ಯಾಸದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಕಳೆದ ಜೂನ್ನಲ್ಲಿ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಮ್ ಗಂಭೀರ್ಗೆ ಮುಂದೆ ಈಗ ಬಿಗ್ ಟಾಸ್ಕ್ಯಿದೆ. ಬಾಂಗ್ಲಾ ಸರಣಿ ಆರಂಭದೊಂದಿಗೆ ಅಸಲಿ ಅಗ್ನಿಪರೀಕ್ಷೆ ಆರಂಭವಾಗಲಿದೆ. ಮುಂದಿನ ಕೆಲ ತಿಂಗಳಲ್ಲಿ 10 ಟೆಸ್ಟ್ ಪಂದ್ಯಗಳನ್ನ ಟೀಮ್ ಇಂಡಿಯಾ ಆಡಲಿದ್ದು, ಇವುಗಳಲ್ಲಿ ಗೆಲುವು ಅನಿವಾರ್ಯವಾಗಿದೆ. ಇಲ್ಲದಿದ್ರೆ 10 ತಿಂಗಳ ಬಳಿಕ ಮುಂದಿನ ವರ್ಷ ಜೂನ್ನಲ್ಲಿ ನಡೆಯೋ WTC ಫೈನಲ್ ಎಂಟ್ರಿಯ ಕನಸು ಭಗ್ನವಾಗಲಿದೆ. ಹಾಗೇನಾದ್ರೂ ಆದ್ರೆ, ಗಂಭೀರ್ ಭವಿಷ್ಯ ಅತಂತ್ರಕ್ಕೆ ಸಿಲುಕಲಿದೆ.
ಗಂಭೀರ್ ಕೋಚ್ ಪಟ್ಟವೇರಿದ ಬಳಿಕ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಗಂಭೀರ್ ಕೇಳಿದ್ದಕ್ಕೆಲ್ಲಾ ಬಿಸಿಸಿಐ ಬಾಸ್ಗಳು ಅಸ್ತು ಎಂದಿದ್ದಾರೆ. ಗಂಭೀರ್ ಬೇಡಿಕೆಯಂತೆ ಅಸಿಸ್ಟೆಂಟ್ ಕೋಚ್ಗಳಾಗಿ ರಾಯನ್ ಟೆನ್ ಡೆಶ್ಕಾಟೆ, ಅಭಿಶೇಕ್ ನಾಯರ್ ಮಣೆ ಹಾಕಲಾಗಿದೆ. ಮಾರ್ನೆ ಮಾರ್ಕೆಲ್ನ ಬೌಲಿಂಗ್ ಕೋಚ್ ಆಗಿ ನೀಡಲಾಗಿದೆ.
ಸಪೋರ್ಟ್ ಸ್ಟಾಫ್ ಆಯ್ಕೆ ಮಾತ್ರವಲ್ಲ. ಟೀಮ್ ಸೆಲೆಕ್ಷನ್ ವಿಚಾರದಲ್ಲೂ ಗಂಭೀರ್ ಮಾತುಗಳಿಗೆ ಮನ್ನಣೆ ನೀಡಲಾಗಿದೆ. ಸೂರ್ಯಕುಮಾರ್ಗೆ ಟಿ20 ನಾಯಕತ್ವ ನೀಡಿದ್ದು, ಹರ್ಷಿತ್ ರಾಣಾ, ಯಶ್ ದಯಾಳ್ ಸೇರಿದಂತೆ ಹಲ ಯುವ ಆಟಗಾರರು ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ್ರ ಹಿಂದೆ ಗಂಭೀರ್ ಶಿಫಾರಸ್ಸು ಕೆಲಸ ಮಾಡಿದೆ. ಜೊತೆಗೆ ಕೆಲ ಆಟಗಾರರನ್ನ ಒಂದೊಂದೆ ಫಾರ್ಮೆಟ್ಗೆ ಸೀಮಿತಗೊಳಿಸಿರೋದ್ರ ಹಿಂದೆಯೂ ಗಂಭೀರ್ ಪಾತ್ರವಿದೆ. ಒಂದೇ ಮಾತಲ್ಲಿ ಹೇಳೋದಾದ್ರೆ, ಹಿಂದೆ ಯಾವ ಕೋಚ್ಗೂ ಸಿಗದ ಅಧಿಕಾರ, ಹಾಲಿ ತಂಡದ ನಾಯಕನಿಗೂ ಇರದ ಪವರ್ ಸದ್ಯ ಗಂಭೀರ್ಗೆ ಸಿಕ್ಕಿದೆ. ಇಷ್ಟೆಲ್ಲಾ ಕೊಟ್ಟು ಪರ್ಫಾಮೆನ್ಸ್ ಬರಲಿಲ್ಲ ಅಂದ್ರೆ ಬಿಸಿಸಿಐ ಬಾಸ್ಗಳು ಸುಮ್ಮನಿರ್ತಾರಾ.?
ಕೋಚ್ ಪಟ್ಟವೇರಿದ ಮೊದಲ ಟಾಸ್ಕ್ನಲ್ಲಿ ಶ್ರೀಲಂಕಾ ಎದುರು ಟಿ20 ಸರಣಿ ಗೆದ್ದ ಗಂಭೀರ್ಗೆ, ಬಳಿಕ ನಡೆದ ಏಕದಿನ ಸರಣಿಯಲ್ಲಿ ಹೀನಾಯ ಸೋಲಿನ ದರ್ಶನವಾಯ್ತು. ಟೀಮ್ ಇಂಡಿಯಾದ ಪರ್ಫಾಮೆನ್ಸ್ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾದ್ವು. ಕಳಪೆ ಬ್ಯಾಟಿಂಗ್, ಸ್ಪಿನ್ ದಾಳಿ ಎದುರಿಸುವಲ್ಲಿ ಸ್ಟಾರ್ಗಳು ಎಡವಿದ್ದು ಎಲ್ಲವೂ ಚರ್ಚೆಯಾಯ್ತು. ಇದೀಗ ಮುಂಬರುವ ಸರಣಿಗಳಲ್ಲಿ ಈ ಹಿಂದಾದ ಎಲ್ಲಾ ವೈಫಲ್ಯಗಳನ್ನ ಮೆಟ್ಟಿ ನಿಲ್ಲಬೇಕಿದೆ.
ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಮಾತ್ರವಲ್ಲ.. ಆ ಬಳಿಕ ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್, ನಂತರ ಆಸ್ಟ್ರೇಲಿಯಾ ಆಸಿಸ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯನ್ನ ಟೀಮ್ ಇಂಡಿಯಾ ಆಡಲಿದೆ. ಈ 10 ಪಂದ್ಯಗಳ ರಿಸಲ್ಟ್ ಆಧಾರದಲ್ಲಿ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಎಂಟ್ರಿ ನಿರ್ಧಾರವಾಗಲಿದೆ. ಜೊತೆಗೆ ಬಿಗ್ಬಾಸ್ ಮುಂದೆ ಬೇಡಿಕೆಯನ್ನಿಟ್ಟು ಕೇಳಿದ್ದನ್ನೆಲ್ಲಾ ಪಡೆದಿರೋ ಗಂಭೀರ್ ಭವಿಷ್ಯವೂ ನಿರ್ಧಾರವಾಗಲಿದೆ.