ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡದ ನಡುವಿನ ಟೆಸ್ಟ್ ಸರಣಿ ಈಗಾಗಲೇ ಶುರುವಾಗಿದೆ. ಈ ಮಹತ್ವದ ಸರಣಿ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ವೇಳೆ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಭಾರತಕ್ಕೆ ಪ್ರಾಕ್ಟೀಸ್ ಮಾಡಲು ಬೆಸ್ಟ್ ಪ್ಲಾಟ್ಫಾರ್ಮ್. ಇದಕ್ಕೆ ಕಾರಣ ಮುಂದಿನ ಟೆಸ್ಟ್ ಸರಣಿ ಟೀಮ್ ಇಂಡಿಯಾ ಆಡುತ್ತಿರುವುದು ವಿದೇಶಿ ನೆಲದಲ್ಲಿ ಎಂದರೆ ಆಸ್ಟ್ರೇಲಿಯಾದಲ್ಲಿ. ಹಾಗಾಗಿ ವಿದೇಶಿ ನೆಲದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಅನ್ನೋ ನಿರೀಕ್ಷೆ ಇದೆ.
ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ರಿಷಬ್ ಪಂತ್ ಕಾಂಗೂರು ನೆಲದಲ್ಲಿ ಹೇಗೆ ಆಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಹೀಗಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆರಂಭಕ್ಕೂ ಮುನ್ನ ಯಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿದೆ ಅನ್ನೋ ಚರ್ಚೆ ಜೋರಾಗಿದೆ. ಇದರ ಮಧ್ಯೆ ಬಿಸಿಸಿಐಗೆ ಟೀಮ್ ಇಂಡಿಯಾದ ಉಪನಾಯಕ ಶುಭ್ಮನ್ ಗಿಲ್ ಸ್ಥಾನದ ಬಗ್ಗೆ ಚಿಂತೆ ಶುರುವಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭ್ಮನ್ ಗಿಲ್. ಇವರು ಬೆಂಗಳೂರು ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯಕ್ಕೆ ತುತ್ತಾಗಿದ್ದರು. ಗಾಯಕ್ಕೆ ತುತ್ತಾದ ಕಾರಣ ಗಿಲ್ ಬದಲಿಗೆ ಸರ್ಫರಾಜ್ ಖಾನ್ಗೆ ಅವಕಾಶ ನೀಡಲಾಯ್ತು. ಗಿಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಈ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟ್ ಬೀಸಿದ ಪರಿಣಾಮ 4ನೇ ಕ್ರಮಾಂಕವನ್ನು ಸರ್ಫರಾಜ್ಗೆ ಬಿಟ್ಟು ಕೊಡಲಾಯ್ತು. ಸಿಕ್ಕ ಅವಕಶಾದಲ್ಲಿ ಸರ್ಫರಾಜ್ ಅಮೋಘ ಬ್ಯಾಟಿಂಗ್ ನಡೆಸಿದರು.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಸರ್ಫರಾಜ್ ಖಾನ್ ಅವರು ತಮ್ಮ ಇಂಟರ್ ನ್ಯಾಷನಲ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ್ರು. ಪಂದ್ಯದ 4ನೇ ದಿನದಾಟದ ಪಂದ್ಯ ಆರಂಭವಾದಾಗ ಟೀಮ್ ಇಂಡಿಯಾ ಯುವ ಬ್ಯಾಟರ್ ಸರ್ಫರಾಜ್ ಖಾನ್ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಶುಕ್ರವಾರ 70 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್ ಅವರು ಇಂದು ಅಬ್ಬರಿಸಿದ್ರು.
ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿದ ಇವರು ಕೇವಲ 110 ಎಸೆತಗಳಲ್ಲಿ ಮೊದಲ ಶತಕ ದಾಖಲಿಸಿದ್ರು. ಈ ಮೂಲಕ ತನ್ನನ್ನು ಮುಂದಿನ ಟೆಸ್ಟ್ ಸರಣಿಗೂ ಪರಿಗಣಿಸಿ ಎಂದು ವಾರ್ನಿಂಗ್ ಕೊಟ್ಟರು. ಇನ್ನೂ ಕ್ರೀಸ್ನಲ್ಲೇ ಇದ್ದು ಬ್ಯಾಟಿಂಗ್ ಮಾಡುತ್ತಿದ್ದಾರೆ. ಬರೋಬ್ಬರಿ 150 ರನ್ ಸಿಡಿಸಿದ್ದು, 18 ಫೋರ್ ಮತ್ತು 3 ಸಿಕ್ಸರ್ ಬಾರಿಸಿದ್ದಾರೆ. ಹಾಗಾಗಿ ಇವರಿಗೆ ಆಸ್ಟ್ರೇಲಿಯಾದ ವಿರುದ್ಧ ಸೀರೀಸ್ಗೆ ಅವಕಾಶ ಸಿಗುವ ಸಾಧ್ಯತೆ ಇದ್ದು, ಗಿಲ್ಗೆ ಇದು ಬಿಗ್ ಶಾಕ್ ಆಗಿದೆ.