ದುಬೈ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ನೂತನ ಅಧ್ಯಕ್ಷರಾಗಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಐಸಿಸಿಯ ಹಾಲಿ ಅಧ್ಯಕ್ಷ ನ್ಯೂಜಿಲೆಂಡ್ನ ಗ್ರೇಗ್ ಬಾರ್ಕ್ಲೆ ತಾವು 3ನೇ ಅವಧಿಗೆ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಹೊಸ ಅಧ್ಯಕ್ಷ ಯಾರು ಎನ್ನುವುದು ಆಗಸ್ಟ್ 27ರೊಳಗೆ ನಿರ್ಧಾರವಾಗಬೇಕಿದ್ದು, ಜಯ್ ಶಾ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ.
ಐಸಿಸಿ ಚುನಾವಣೆಯಲ್ಲಿ ಮತ ಚಲಾಯಿಸಲು 16 ಸದಸ್ಯರಿಗೆ ಅಧಿಕಾರವಿದ್ದು, ಬಹುತೇಕ ಎಲ್ಲರ ಜೊತೆಗೂ ಜಯ್ ಶಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಒಂದು ವೇಳೆ ಜಯ್ ಶಾ ಕಣಕ್ಕಿಳಿಯಲು ನಿರ್ಧರಿಸಿದರೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.