ಭಾರತೀಯ ಕ್ರಿಕೆಟ್ ತಾರೆ ಮೊಹಮ್ಮದ್ ಶಮಿ ಇತ್ತೀಚೆಗೆ ತಮ್ಮ ಹೊಸ ಲುಕ್ ಅನ್ನು ಹಂಚಿಕೊಂಡಿದ್ದು, ಸಾಕಷ್ಟು ಗಮನ ಸೆಳೆದಿದೆ. ಕೂದಲು ಕಸಿ ಮಾಡಿಸಿಕೊಂಡಿರುವ ಶಮಿ ಅವರು ತಮ್ಮ ಹೊಸ ಲುಕ್ನಲ್ಲಿ ಸಖತ್ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ.
ಇದೇ ಸಮಯದಲ್ಲಿ ಭಾರತದ ಟೆನ್ನಿಸ್ ಐಕಾನ್ ಸಾನಿಯಾ ಮಿರ್ಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಕೂಡ ಅಭಿಮಾನಿಗಳ ಗಮನ ಸೆಳೆದಿದೆ.
ಫೋಟೋದಲ್ಲಿ ಸಾನಿಯಾ ಸ್ಟೈಲಿಶ್ ಬಿಳಿ ಮತ್ತು ಕಪ್ಪು ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರ ಪೋಸ್ಟ್ಗೆ ಸಖತ್ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಮೊಹಮ್ಮದ್ ಶಮಿಯನ್ನು ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ.
ಜನವರಿಯಲ್ಲಿ ಸಾನಿಯಾ ಮಿರ್ಜಾ ತನ್ನಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ಗೆ ವಿಚ್ಛೇದನ ನೀಡಿದಾಗಿನಿಂದ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ನಡುವಿನ ವಿವಾಹ ವದಂತಿಗಳು ಹರಿದಾಡುಯತ್ತಿವೆ. ಶಮಿ ತನ್ನ ಪತ್ನಿ ಹಸಿನ್ ಜಹಾನ್ಗೆ ವಿಚ್ಛೇದನ ನೀಡಿರುವ ಕಾರಣ ಈ ವದಂತಿಗಳು ಸಾಕಷ್ಟು ಮಹತ್ವ ಪಡೆದಿದ್ದವು.
ಇನ್ನು ಈ ಮದುವೆಯ ಊಹಾಪೋಹಗಳನನು ಶಮಿ ದೃಢವಾಗಿ ತಳ್ಳಿ ಹಾಕಿದ್ದಾರೆ. ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಶಮಿ ವದಂತಿಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ನಿಮ್ಮ ವೀಮ್ಗಳಿಂದ ಅನೇಕರಿಗೆ ನೋವಾಗಿದೆ. ಕೆಲವರನ್ನು ಟಾರ್ಗೆಟ್ ಮಾಡಿ ಈ ರೀತಿ ವದಂತಿ ಹರಡಿಸಲಾಗುತ್ತಿದೆ ಎಂದಿದ್ದರು.