ಪ್ರಪ್ರಥಮ ಖೋ ಖೋ ವಿಶ್ವಕಪ್ನಲ್ಲಿ ಭಾರತಕ್ಕೆ ಡಬಲ್ ಧಮಾಕ ಸಿಕ್ಕಿದೆ. ಎರಡೆರಡು ಟ್ರೋಫಿಗಳನ್ನ ಭಾರತ ತನ್ನ ಮುಡಿಗೇರಿಸಿಕೊಂಡಿದೆ. ಭಾರತದ ಪುರುಷ, ಮಹಿಳಾ ತಂಡಗಳು ಚಾಂಪಿಯನ್ ಆಗಿ ಗೆದ್ದು ಬೀಗಿವೆ. ಟೂರ್ನಮೆಂಟ್ನ ಪ್ರತೀ ಮ್ಯಾಚ್ ನಲ್ಲಿಯೂ ತನ್ನ ಅಬ್ಬರದ ಪ್ರದರ್ಶನ ತೋರಿದ ಟೀಂ ಇಂಡಿಯಾ ಫೈನಲ್ ನಲ್ಲಿ ಗೆಲ್ಲುವ ವಿಶ್ವಾಸ ಮೂಡಿಸಿತ್ತು. ಅದರಂತೆಯೇ ಫೈನಲ್ನಲ್ಲಿ ಗೆದ್ದು ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಕಪ್ ಗೆದ್ದು ಭಾರತಕ್ಕೆ 2 ಕಿರೀಟ ತಂದುಕೊಟ್ಟಿದ್ದಾರೆ.
ಪುರುಷ ಹಾಗೂ ಮಹಿಳಾ ತಂಡಗಳು ಎರಡೂ ಸಹ ಚೊಚ್ಚಲ ವಿಶ್ವಕಪ್ ಟೂರ್ನಮೆಂಟ್ನಲ್ಲಿ ಅಧಿಕಾರಯುತ ಗೆಲುವು ಸಾಧಿಸಿದ್ದಾವೆ. ಟೀಂ ಇಂಡಿಯಾದ ವೇಗ ಹಾಗೂ ಕ್ರೀಡಾ ಕೌಶಲ್ಯತೆ, ಕಾರ್ಯತಂತ್ರ, ಟೈಂ ಮ್ಯಾನೇಜ್ಮೆಂಟ್ ಹೀಗೆ ಪ್ರತೀ ಒಂದು ಕೂಡ ಯೋಜನೆಯಂತೆಯೇ ಆಟವಾಡಿ ಗೆದ್ದು ಭೀಗಿದ್ದಾರೆ.
ಭಾನುವಾರ ಸಂಜೆ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ಮಹಿಳಾ ವಿಭಾಗದ ಫೈನಲ್ನಲ್ಲಿ ಟೀಂ ಇಂಡಿಯಾ ನೇಪಾಳ ವಿರುದ್ಧ 78-40 ಅಂಕಗಳ ಸಖತ್ ಗೆಲುವು ಸಾಧಿಸಿತು. ಟೀಂ ಇಂಡಿಯಾದ ಮಹಿಳಾ ಮಣಿಗಳು ಆಕ್ರಮಣಕಾರಿ ಆಟಕ್ಕೆ ಪ್ರಾಮುಖ್ಯತೆ ನೀಡಿದರು.
ಆಟದ ಆರಂಭದಲ್ಲೇ 7 ಬಾರಿ ನೇಪಾಳ ತಂಡದ 3 ಬ್ಯಾಚ್ಗಳನ್ನು ಔಟ್ ಮಾಡಿದ ನಾರಿಮಣಿಯರು 14 ಅಂಕ ಗಳಿಸಿ ಮುನ್ನಡೆ ಸಾಧಿಸಿದರು. 2ನೇ ಅವಧಿಯ ಆಟ ಮುಕ್ತಾಯಕ್ಕೆ ಭಾರತ 35-24 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತ್ತು. ಆ ನಂತರವೂ ಸಹ ಭಾತರ ತನ್ನ ದಿಟ್ಟ ನಿಲುವನ್ನ ಬದಲಾಯಿಸದೆ ಮುನ್ನಡೆಯಿತು. ನಂತರ 38 ಅಂಕಗಳ ಭರ್ಜರಿ ಅಂತರದೊಂದಿಗೆಗೆದ್ದು ಬೀಗಿದೆ
ಇನ್ನೂ ಪುರುಷರ ತಂಡಕ್ಕೆ ಬರೋದಾದರೇ, ಮಹಿಳಾಮಣಿಯರಂತೆಯೇ ಪುರುಷ ಸಿಂಹಗಳು ಕೊನೆಯ ಆಟದಲ್ಲಿ ನೇಪಾಳ ತಂಡವನ್ನ ಹೂವಿನ ಮಾಲೆ ಎತ್ತಿದಂಗೆ ಸೋಲಿಸಿತು. ತಂಡಕ್ಕೆ 54-36 ಅಂಕಗಳ ಬಹು ಅಂತರದಿಂದ ಛಾಂಪಿಯನ್ಸ್ ಪಟ್ಟವನ್ನ ಮುಡಿಗೇರಿಸಿಕೊಂಡಡು. ಆಟದ ಪ್ರಾರಂಭದಲ್ಲಿಯೇ ನೇಪಾಳ ತಂಡದ ಮೇಲೆ ಪ್ರಾಬಲ್ಯ ಸಾಧಿಸಿದ್ದ ಟೀಂ ಇಂಡಿಯಾ ಪುರುಷರ ತಂಡ, ಮೊದಲ ಆವೃತ್ತಿಯಲ್ಲಿಯೇ 26-0 ಅಂಕಗಳ ಮುನ್ನಡೆ ಸಾಧಿಸಿತು. ನಂತರ 2ನೇ ಆವೃತ್ತಿಯಲ್ಲಿ ನೇಪಾಳ 18 ಅಂಕ ಗಳಿಸಿ ಭಾರತಕ್ಕೆ ಟಕ್ಕರ್ ಕೊಟ್ಟರೂ ಸಹ ಕೊನೆವರೆಗೂ ಮುನ್ನಡೆ ಕಾಯ್ದುಕೊಂಡ ಭಾರತ ಫೈನಲ್ ನಲ್ಲಿ ಕಪ್ ತನ್ನದಾಗಿಸಿಕೊಂಡಿತು.
ಕನ್ನಡಿಗರ ಆರ್ಭಟ:
ಭಾರತದ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮುವುದರ ಹಿಂದೆ ಕನ್ನಡಿಗರ ಕೊಡುಗೆಯೂ ಅಪಾರವಾಗಿದೆ. ಪುರುಷರ ತಂಡಕ್ಕೆ ಬೆಂಗಳೂರಿನ ಗೌತಮ್ ಅವರು ಡಿಫೆಂಡರ್ ಆಗಿ ಒಳ್ಳೆಯ ಪ್ರದರ್ಶನ ತೋರಿದರೇ ಮಹಿಳಾ ತಂಡದಲ್ಲಿ ಮೈಸೂರಿನ ಚೈತ್ರಾ ಅವರು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಜೊತೆಗೆ ಮಹಿಳಾ ತಂಡದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಕನ್ನಡತಿ ಚೈತ್ರಾ ಅವರು ಮುಡಿಗೇರಿಸಿಕೊಂಡಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B