ಐಸಿಸಿ ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾಕ್ಕೆ ಬಿಸಿಸಿಐ ಬರೋಬ್ಬರಿ 125 ಕೋಟಿ ರೂಪಾಯಿ ಬಂಪರ್ ಗಿಫ್ಟ್ ನೀಡಿದೆ. ಆದ್ರೆ, ಈ ಹಿಂದೆ 1983 ರಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದಾಗ ಯಾವೊಬ್ಬ ಆಟಗಾರರಿಗೆ ಗೆಲುವಿನ ಗಿಫ್ಟ್ ನೀಡಲು ಬಿಸಿಸಿಐ ಬಳಿ ಹಣವೇ ಇರಲಿಲ್ಲ. ಆಗ ಆಟಗಾರರಿಗೆ ಹಣದ ಉಡುಗೊರೆಯಾಗಿ ನೀಡಿದ್ದು, ಖ್ಯಾತ ಗಾಯಕಿ ಲತಾ ಮಂಗೇಶ್ಕರ್.
ಹೌದು ಅಚ್ಚರಿ ಎನಿಸಿದರು, ಐಸಿಸಿ ಟಿ20 ವಿಶ್ವಕಪ್ ಗೆದ್ದು ಬೀಗಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಇಂದು ಭಾರತಕ್ಕೆ ಬಂದಿಳಿದಿದೆ. ಟೀಮ್ ಇಂಡಿಯಾಕ್ಕೆ ದೇಶದಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯಿತು. ಬಳಿಕ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆದರು. ಇದೀಗ ನಾರಿಮನ್ ಪಾಯಿಂಟ್ನಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದವರೆಗೆ ತೆರೆದ ಚಾವಣಿಯ ಬಸ್ನಲ್ಲಿ ತಂಡದ ವಿಜಯೋತ್ಸವದ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಮೊನ್ನೆಯಷ್ಟೆ ಬಿಸಿಸಿಐ ಪ್ರಶಸ್ತಿ ಗೆದ್ದ ಟೀಮ್ ಇಂಡಿಯಾಗೆ ಬರೋಬ್ಬರಿ 125 ಕೋಟಿ ರೂಪಾಯಿ ಬಹುಮಾನವನ್ನೂ ಘೋಷಿಸಿತು. ಆದರೆ, ಈ ಹಿಂದೆ ಭಾರತ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆದ್ದಾಗ ಆಟಗಾರರನ್ನು ಸನ್ಮಾನಿಸಲು ಬಿಸಿಸಿಐ ಹಣವೇ ಇರಲಿಲ್ಲ.
41 ವರ್ಷಗಳ ಹಿಂದೆ 1983 ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ದಕ್ಕಿತು. ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಚಾಂಪಿಯನ್ ಆಯಿತು. ಆದರೆ, ಆಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಳಿ ತನ್ನ ಆಟಗಾರರನ್ನು ಸನ್ಮಾನಿಸಲು ಅಥವಾ ಅದ್ಧೂರಿ ಸ್ವಾಗತಕ್ಕೆ ಹಣವೇ ಇರಲಿಲ್ಲ. ಇಂಗ್ಲೆಂಡ್ನಿಂದ ತವರಿಗೆ ಬಂದ ಆಟಗಾರರಿಗೆ ಭವ್ಯ ಸ್ವಾಗತ ಇರಲಿಲ್ಲ, ತೆರೆದ ಬಸ್ನಲ್ಲಿ ಮೆರವಣಿಗೆ ಇರಲಿಲ್ಲ. ಅಂದು ಬಿಸಿಸಿಐನ ಮುಖ್ಯಸ್ಥರಾಗಿದ್ದ ಎನ್ಕೆಪಿ ಸಲ್ವ್ ಆಟಗಾರರಿಗೆ ಕೇವಲ ಶುಭಕೋರಿದರಷ್ಟೆ.