ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಒಂದು ಪದಕ ಗೆದ್ದ ಮನು ಭಾಕರ್ ಇದೀಗ ಮತ್ತೊಂದು ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಕ್ರೀಡಾಪಟು ಎನಿಸಿಕೊಂಡಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ನಲ್ಲಿ ಕಂಚು ಪದಕ ಗೆದ್ದಿದ್ದಾರೆ. ಸರಬ್ಜೋತ್ ಸಿಂಗ್ ಜೊತೆಯಲ್ಲಿ ಮಿಶ್ರ ತಂಡದ ವಿಭಾಗದಲ್ಲಿ ಕಣಕ್ಕಿಳಿದಿದ್ರು. ಇದೀಗ ದಕ್ಷಿಣ ಕೊರಿಯಾ ವಿರುದ್ಧ ಭಾರತದ ಜೋಡಿ ಗೆದ್ದು ಬೀಗಿದೆ.