ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದ ಎಸ್ಎಲ್ 3 ಫೈನಲ್ನಲ್ಲಿ ಭಾರತದ ನಿತೀಶ್ ಕುಮಾರ್ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಎಸ್ಎಲ್ 3 ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ನಿತೀಶ್ ಗ್ರೇಟ್ ಬ್ರಿಟನ್ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ನಿತೀಶ್ ಕುಮಾರ್ ಮೊದಲ ಸೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಈ ಮೂಲಕ ಎದುರಾಳಿಗಳ ತಂತ್ರವನ್ನು ಮೆಟ್ಟಿ ನಿಂತರು. ಈ ಅವಧಿಯಲ್ಲಿ ಉತ್ತಮ ಸ್ನ್ಯಾಷ್ ಹಾಗೂ ಗ್ಯಾಪ್ ಶಾಟ್ಗಳನ್ನು ನಿತೀಶ್ ಪ್ರಯೋಗಿಸಿದರು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ನಿತೀಶ್ 21-14 ರಿಂದ ಮೊದಲ ಗೇಮ್ ಗೆದ್ದರು.
ಗ್ರೇಟ್ ಬ್ರಿಟನ್ನ ಡೇನಿಯಲ್ ಬೆತೆಲ್ ಎರಡನೇ ಗೇಮ್ನಲ್ಲಿ ಮುನ್ನಡೆ ಸಾಧಿಸಿ ಮಿಂಚಿದರು. ಈ ಗೇಮ್ನ್ನು ಬೆತೆಲ್ 21-18 ರಿಂದ ಗೆದ್ದುಕೊಂಡರು. ಉಭಯ ಆಟಗಾರರು ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ ಮೂರನೇ ಸೆಟ್ ಕಡೆ ಮುಖ ಮಾಡಲಾಯಿತು. ಈ ಅವಧಿಯಲ್ಲಿ ಉಭಯ ಆಟಗಾರರು ಸುಲಭವಾಗಿ ಅಂಕಗಳನ್ನು ಬಿಟ್ಟು ಕೊಡಲಿಲ್ಲ. ಕೊನೆಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಭಾರತದ ಅಥ್ಲೀಟ್ಗಳು ಅಬ್ಬರಿಸಿದರು. ಅಲ್ಲದೆ ರೋಚಕತೆ ಹುಟ್ಟಿಸಿದ್ದ ಫೈನಲ್ ಪಂದ್ಯವನ್ನು ಸತತ ಎರಡು ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಇದುವರೆಗೆ ಒಟ್ಟು 9 ಪದಕಗಳನ್ನು ಗೆದ್ದಿದೆ. ಪ್ರಸಕ್ತ ಕ್ರೀಡಾಕೂಟದಲ್ಲಿ ನಿತೀಶ್ ಕುಮಾರ್ ಬ್ಯಾಡ್ಮಿಂಟನ್ ನಲ್ಲಿ ಪದಕ ಗೆದ್ದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಇವರಿಗೂ ಮೊಲು ಅವನಿ ಲೆಖರಾ ಅವರು 10 ಮೀಟರ್ ಏರ್ ರೈಫಲ್ ವಿಭಾಬದಲ್ಲಿ ಬಂಗಾರದ ಸಾಧನೆ ಮಾಡಿದ್ದರು.