ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಿಕ್ಕಿದೆ. ಇದು ಭಾರತಕ್ಕೆ ಸಿಕ್ಕ 3ನೇ ಪದಕವಾಗಿದೆ. 50 ಮೀಟರ್ ರೈಫಲ್ 3 ಪೊಸಿಷನ್ಸ್ ಪುರುಷರ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದರು. 8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಮೂರನೇ ಕಂಚಿನ ಪದಕ ಗೆದ್ದು ಕೊಟ್ಟಿದ್ದಾರೆ ಸ್ವಪ್ನಿಲ್ ಕುಸಾಲೆ. ಚೀನಾದ ಲಿಯು ಯುಕುನ್ ಚಿನ್ನದ ಪದಕ ಗೆದ್ರೆ, ಉಕ್ರೇನ್ ಸೆರ್ಹಿ ಕುಲಿಶ್ ಬೆಳ್ಳಿ ಪದಕ ಗೆದ್ದರು. ಇನ್ನೂ ಭಾರತದ ಕ್ರೀಡಾಪಟು ಸ್ವಪ್ನಿಲ್ ಕುಸಾಲೆ ಕಂಚು ಪದಕ ಗೆದ್ದರು.