ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಇಂದು ಮೊದಲ ಗುಂಪಿನಲ್ಲಿ ಮಾಲ್ಡೀವ್ಸ್ನ ಫಾತಿಮತ್ ನಬಾಹಾ ಅಬ್ದುಲ್ ರಜಾಕ್ ವಿರುದ್ಧ 21-9, 21-6 ಅಂತರದಲ್ಲಿ ಜಯಗಳಿಸಿದ್ದಾರೆ.
ಮೂರನೇ ಪದಕಕ್ಕಾಗಿ ಪಿ.ವಿ ಸಿಂಧು ಕಣ್ಣೀಟ್ಟಿದ್ದಾರೆ. 25ರ ಹರೆಯದ ಮಾಲ್ಡೀವಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧುಗೆ ಸರಿಸಾಟಿಯಾಗಲಿಲ್ಲ. ಭಾರತೀಯ ಆಟಗಾರ್ತಿ 20 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದರು.
2016 ರ ರಿಯೊ ಒಲಿಂಪಿಕ್ಸ್ನಲ್ಲಿ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಿಂಧು, ಒಲಿಂಪಿಕ್ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ಅಥ್ಲೀಟ್ ಆಗುವ ನಿರೀಕ್ಷೆಯಲ್ಲಿದ್ದಾರೆ.
ಸಿಂಧು ತಮ್ಮ ಎರಡನೇ ಗುಂಪಿನ ಎಂ ಪಂದ್ಯದಲ್ಲಿ ಬುಧವಾರ (ಜುಲೈ 31) ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ಅವರನ್ನು ಎದುರಿಸಲಿದ್ದಾರೆ. ಭಾನುವಾರ ನಡೆಯಲಿರುವ ಇತರ ಬ್ಯಾಡ್ಮಿಂಟನ್ ಪಂದ್ಯಗಳಲ್ಲಿ ಸ್ಟಾರ್ ಪುರುಷರ ಷಟ್ಲರ್ ಎಚ್ಎಸ್ ಪ್ರಣಯ್ ಜರ್ಮನಿಯ ಫ್ಯಾಬಿಯನ್ ರೋತ್ ಅವರನ್ನು ಎದುರಿಸಲಿದ್ದಾರೆ.