ದೇಶ ಕಂಡ ಅತ್ಯುತ್ತಮ ಕ್ರೀಡಾಪಟುಗಳ ಪೈಕಿ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಕೂಡ ಸೇರಿದ್ದಾರೆ. ಶಮಿ 2023ರ ಏಕದಿನ ವಿಶ್ವಕಪ್ನಲ್ಲಿ ಫೈನಲ್ಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಚಾಂಪಿಯನ್ ಬೌಲರ್, ಸಾನಿಯಾ ಅವರು ಭಾರತದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿ. ಇಬ್ಬರು ತಮ್ಮ ಜೀವನ ಸಂಗಾತಿಯಿಂದ ದೂರಾಗಿದ್ದಾರೆ. ಹೀಗಾಗಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಿದೆ. ಇತ್ತೀಚೆಗಂತೂ ಈ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದ್ದು, ಕೊನೆಗೂ ಮೊಹಮ್ಮದ್ ಶಮಿ ಈ ವಿಚಾರವಾಗಿ ಮೌನ ಮುರಿದಿದ್ದಾರೆ.
ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್ ವಿಚ್ಛೇದನ ಪಡೆದಿದ್ದರು. ಅವರಂತೆಯೇ, ಶಮಿ ಮತ್ತು ಅವರ ಪತ್ನಿ ಹಸಿನ್ ಜಹಾನ್ ಸಹ ಬೇರ್ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಸಾನಿಯಾ ಮತ್ತು ಶಮಿ ವಿವಾಹವಾಗುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಅಲ್ಲದೆ ಮದುವೆ ಫೋಟೋಗಳು ಕೂಡ ಹರಿದಾಡಿದ್ದವು. ಆದರೆ ಈ ಚಿತ್ರಗಳು ಸ್ಪಷ್ಟವಾಗಿ ನಕಲಿ ಎಂಬುದು ಬಯಲಾಗಿದೆ. ಇದರ ನಡುವೆ ಇಬ್ಬರೂ ಇನ್ನೂ ಮದುವೆಯಾಗಿಲ್ಲ ಮತ್ತು ಆಗಸ್ಟ್ 20 ರಂದು ಮದುವೆ ಸಮಾರಂಭ ನಿಗದಿಪಡಿಸಲಾಗಿದೆ ಎಂದು ವದಂತಿಗಳು ಸಹ ಹರಿದಾಡುತ್ತಿವೆ. ಈ ಬಗ್ಗೆ ಸಾನಿಯಾ ಆಗಲಿ ಅಥವಾ ಮೊಹಮ್ಮದ್ ಶಮಿ ಆಗಲಿ ಅಧಿಕೃತ ಪ್ರತಿಕ್ರಿಯೆ ನೀಡಿರಲಿಲ್ಲ. ಇದೆಲ್ಲದರ ನಡುವೆ ಶಮಿ ಮೌನ ಮುರಿದಿದ್ದಾರೆ. ಇತ್ತೀಚೆಗೆ ಶುಭಾಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಮಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುಳ್ಳುಗಳ ಬಗ್ಗೆ ತುಂಬಾ ಎಚ್ಚರದಿಂದ ಇರುವಂತೆ ಸಲಹೆ ನೀಡಿದ್ದಾರೆ. ತಮ್ಮ ಮತ್ತು ಸಾನಿಯಾ ಕುರಿತು ಹರಿದಾಡುತ್ತಿರುವ ಮೀಮ್ಸ್ ಮನರಂಜನೆಯನ್ನು ನೀಡುತ್ತದೆ ಹಾಸ್ಯ ಚಟಾಕಿ ಹಾರಿಸಿದ ಶಮಿ, ಅದೇ ಮೀಮ್ಸ್ ಕೆಲವೊಮ್ಮೆ ಹಾನಿಯನ್ನು ಉಂಟು ಮಾಡುತ್ತದೆ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣವನ್ನು ತುಂಬಾ ಜವಾಬ್ದಾರಿಯುತವಾಗಿ ಬಳಸುವಂತೆ ಮತ್ತು ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರದಿಂದ ಇರುವಂತೆ ಕರೆ ನೀಡಿದರು.
ಮೀಮ್ಸ್ ಬಗ್ಗೆ ಮಾತನಾಡಿದ ಶಮಿ, ಇದು ವಿಚಿತ್ರವಾಗಿದೆ ಮತ್ತು ಇವುಗಳನ್ನು ಹಾಸ್ಯದ ಉದ್ದೇಶಕ್ಕಾಗಿ ಮಾಡಲಾಗುತ್ತದೆ. ಈ ವಿಚಾರದಲ್ಲಿ ನಾವು ಏನು ಮಾಡಬಹುದು? ನಾನು ಫೋನ್ ತೆರೆದಾಗ ಆ ಮೀಮ್ಗಳನ್ನು ನೋಡಿ ನಗಬಹುದಷ್ಟೇ. ಈ ಮೀಮ್ಗಳನ್ನು ಕೇವಲ ತಮಾಷೆಗಾಗಿ ಮಾಡಲಾಗಿದೆ ಎಂದು ಭಾವಿಸುತ್ತೇನೆ. ಆದರೆ, ಆ ಮೀಮ್ಗಳು ಯಾರೊಬ್ಬರ ಜೀವನಕ್ಕೆ ಸಂಬಂಧಿಸಿದ್ದರೆ, ನೀವು ಅದರ ಬಗ್ಗೆ ಯೋಚಿಸಿದ ಬಳಿಕ ಮೀಮ್ಗಳನ್ನು ಹಂಚಿಕೊಳ್ಳಬೇಕು ಕೆಲವರು ಅನಧಿಕೃತ ಪೇಜ್ಗಳಿಂದ ಇಂತಹ ವಿಷಯಗಳನ್ನು ಶೇರ್ ಮಾಡುತ್ತಾರೆ. ಆದರೆ, ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಅಧಿಕೃತ ಪುಟದಿಂದ ಈ ಎಲ್ಲ ವಿಷಯಗಳನ್ನು ಹಂಚಿಕೊಳ್ಳಲು ನಿಮಗೆ ಧೈರ್ಯವಿದ್ದರೆ ಮಾತ್ರ ನಾನು ಉತ್ತರಿಸುತ್ತೇನೆ. ಇಂತಹ ವಿಷಯಗಳನ್ನು ಬಿಟ್ಟು ಯಶಸ್ಸನ್ನು ಸಾಧಿಸಲು ಪ್ರಯತ್ನಿಸಿ, ಜನರಿಗೆ ಸಹಾಯ ಮಾಡಿ ಮತ್ತು ನಿಮ್ಮನ್ನು ಅಪ್ಗ್ರೇಡ್ ಮಾಡಿಕೊಳ್ಳಿ ಎಂದು ಸಲಹೆ ಶಮಿ ಸಲಹೆ ನೀಡಿದರು.