ಭಾರತ ಮತ್ತು ಶ್ರೀಲಂಕಾ ನಡುವೆ 3 ಟಿ20 ಪಂದ್ಯಗಳ ಸರಣಿ ನಡೆಯುತ್ತಿದೆ. ಶನಿವಾರ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 40ಕ್ಕೂ ಹೆಚ್ಚು ರನ್ಗಳಿಂದ ಗೆದ್ದು ಬೀಗಿದೆ. ಟಿ20 ಸರಣಿ ಬೆನ್ನಲ್ಲೇ ಏಕದಿನ ಸೀರೀಸ್ ಶುರುವಾಗಲಿದೆ. ಆಗಸ್ಟ್ 2ನೇ ತಾರೀಕಿನಿಂದ ಏಕದಿನ ಪಂದ್ಯ ಆರಂಭವಾಗಲಿದೆ. ಇನ್ನು, ಈಗಾಗಲೇ ಏಕದಿನ ಸರಣಿಗಾಗಿ ಕನ್ನಡಿಗ ಕೆ.ಎಲ್ ರಾಹುಲ್ ನೆಟ್ನಲ್ಲಿ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ದಿನಕ್ಕೆ 10 ಗಂಟೆಗಳ ಕಾಲ ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಈ ಮಧ್ಯೆ ತನ್ನ ಸ್ಟ್ರಾಂಗ್ ಕಮ್ಬ್ಯಾಕ್ ಮಾತಾಡಿದ್ದಾರೆ ಕೆ.ಎಲ್ ರಾಹುಲ್.
ಭರ್ಜರಿ ಕಮ್ಬ್ಯಾಕ್ ಬಗ್ಗೆ ಮಾತಾಡಿದ ಕೆ.ಎಲ್ ರಾಹುಲ್
ಶ್ರೀಲಂಕಾ ತಂಡದ ವಿರುದ್ಧ ಆಡಲು ಸಜ್ಜಾಗಿದ್ದೇನೆ. ಕಳೆದ ಮೂರು ದಿನಗಳಿಂದ ಸಾಕಷ್ಟು ನೆಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ನನಗೆ ಕೋಚ್ ಮತ್ತು ಕ್ಯಾಪ್ಟನ್ ನೀಡಿರೋ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧನಾಗಿದ್ದೇನೆ.
ನನ್ನ ತಲೆಯಲ್ಲಿ ಏನು ಮಾಡಬೇಕು ಎಂಬ ಪ್ಲಾನ್ ಇದೆ. ಬ್ಯಾಟಿಂಗ್ ಮತ್ತು ಕೀಪಿಂಗ್ನಲ್ಲಿ ಸಾಧ್ಯವಾದಷ್ಟು ಉತ್ತಮವಾಗಿ ಆಡಲು ಪ್ರಯತ್ನ ಮಾಡುತ್ತೇನೆ. ನನಗೂ ಇದು ಸ್ಟ್ರಾಂಗ್ ಕಮ್ಬ್ಯಾಕ್ ಆಗಲಿದೆ, ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದೇನೆ ಎಂದರು ಕೆ.ಎಲ್ ರಾಹುಲ್. ಈ ಮೂಲಕ ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.