ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರು ವಿಶ್ವಕಪ್ ವಿಜೇತ ತಂಡದ ಎಲ್ಲ ಆಟಗಾರರು ಹಾಗೂ ತರಬೇತಿ ಬಳಗಕ್ಕೆ ಒಟ್ಟು 125 ಕೋಟಿ ಬಹುಮಾನ ಘೋಷಿಸಿದ್ದರು. ಆದರೆ ಬಹುಮಾನ ಮೊತ್ತ ಆಟಗಾರರು ಮತ್ತು ತರಬೇತಿ ಸಿಬ್ಬಂದಿಗೆ ಹೇಗೆ ಹಂಚಲಾಗುತ್ತದೆ ಎಂಬುದನ್ನು ಭಾರತೀಯ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ ಒಂದೂ ಪಂದ್ಯವನ್ನು ಆಡದ ಸಂಜು ಸ್ಯಾಟ್ಸನ್ ಮತ್ತು ಯುಜುವೇಂದ್ರ ಚಾಹಲ್ ಸೇರಿ ಭಾರತ ತಂಡದ ಎಲ್ಲ 15 ಆಟಗಾರರು ತಲಾ 5 ಕೋಟಿ ಹಾಗೂ ಮುಖ್ಯಕೋಚ್ ರಾಹುಲ್ ದ್ರಾವಿಡ್ 2.5 ಕೋಟಿ ಪಡೆಯಲಿದ್ದಾರೆ ಎನ್ನಲಾಗಿದೆ.
ಮೀಸಲು ಆಟಗಾರರು ಬಹುಮಾನ ಪಡೆಯಲು ಅರ್ಹರೆನಿಸಿದ್ದಾರೆ. ಟೀಮ್ ಇಂಡಿಯಾದ ಪ್ರಧಾನ ತಂಡದಲ್ಲಿದ್ದ ಎಲ್ಲ ಆಟಗಾರರ ಜತೆಗೆ ಮೀಸಲು ಆಟಗಾರರಾಗಿದ್ದ ರಿಂಕು ಸಿಂಗ್, ಶುಭಮಾನ್ ಗಿಲ್, ಆವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ತಲಾ 1 ಕೋಟಿ ಬಹುಮಾನ ಪಡೆಯಲಿದ್ದಾರೆ.