- ಮೊಹಮ್ಮದ್ ಶಮಿ ಹಾಗೂ ಸಾನಿಯಾ ಮಿರ್ಜಾ ಮದುವೆ ?
- ಎಲ್ಲಾ ವದಂತಿಗಳಿಗೆ ಉತ್ತರ ಕೊಟ್ಟ ಟೆನಿಸ್ ತಾರೆ ಸಾನಿಯಾ
- “The Answer Is Sabr, Its Always Sabr ” ಎಂದ ಸಾನಿಯಾ
ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕಳೆದ ವರ್ಷ ಪತಿ ಶೋಯೆಬ್ ಮಲಿಕ್ನಿಂದ ದೂರವಾಗಿದ್ದಾರೆ. ಇದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು.
ಟೀಮ್ ಇಂಡಿಯಾ ದಿಗ್ಗಜ ವೇಗದ ಬೌಲರ್ ಮೊಹಮ್ಮದ್ ಶಮಿ ಹಾಗೂ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಂದಿನಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ. ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಾನಿಮಾ ಮಿರ್ಜಾ ಅವರು ಕೊನೆಗೂ ಉತ್ತರ ನೀಡಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೌನ ಮುರಿದಿದ್ದಾರೆ.
ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಮೊಹಮ್ಮದ್ ಶಮಿ ಮದುವೆ ಬಗ್ಗೆ ಎಲಲಿಯೂ ಅಧಿಕೃತವಾಗಿ ವರದಿಯಾಗಿಲ್ಲ. ಮೊಹಮ್ಮದ್ ಶಮಿ ಕೂಡ ಈ ಬಗ್ಗೆ ಕಾಮೆಂಟ್ ಮಾಡಿಲ್ಲ. ಆದರೆ ಸಾನಿಯಾ ಮಿರ್ಜಾ ಅವರ ತಂದೆ ಈ ಎಲ್ಲಾ ವದಂತಿಗಳ ಬಗ್ಗೆ ಮಾತನಾಡಿದ್ದರು. ಇದೆಲ್ಲದರ ನಡುವೆ ಸಾನಿಯಾ ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದು, ಜನರು ತಾಳ್ಮೆಯಿಂದಿರಿ ಎಂದು ಸಲಹೆ ನೀಡಿದ್ದಾರೆ.
ಸಾನಿಯಾ ಮಿರ್ಜಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಸ್ಟೋರಿ ಹಂಚಿಕೊಂಡಿದ್ದಾರೆ. “The Answer Is Sabr, Its Always Sabr ” ಎಂದಿದ್ದಾರೆ. ಅಂದರೆ ತಾಳ್ಮೆಯಿಂದಿರಿ… ಯಾವಾಗಲೂ ತಾಳ್ಮೆಯಿಂದಿರಿ ಎಂದು ಅರ್ಥ. ಎಲ್ಲಾ ವದಂತಿಗಳಿಗೂ ಸ್ಪಷ್ಟತೆ ಸಿಗಲಿದೆ ತಾಳ್ಮೆಯಿಂದಿರಿ ಎಂದು ಹೇಳಿದ್ದಾರೆ.