ಬಾರ್ಬಡೋಸ್ನಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಟೀಮ್ ಇಂಡಿಯಾ, ನಾಲ್ಕು ದಿನಗಳ ಬಳಿಕ ತವರಿಗೆ ಮರಳಿದೆ. ಚಾಂಪಿಯನ್ ತಂಡಕ್ಕೆ ಏರ್ ಪೋರ್ಟ್ನಲ್ಲಿ ಅದ್ಭುತವಾಗಿ ಸ್ವಾಗತ ನೀಡಲಾಗಿದೆ. ಟೀಮ್ ಇಂಡಿಯಾ ಆಟಗಾರರು ಅಭಿಮಾನಿಗಳತ್ತ ಕೈ ಬಿಸಿ, ನವದೆಹಲಿಯ ಮೌರ್ಯ ಹೊಟೇಲ್ಗೆ ತೆರಳಿದೆ. ಮೌರ್ಯದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ವಿಶೇಷ ಸ್ವಾಗತವನ್ನು ನೀಡಲಾಯಿತು. ಈ ವೇಳೆ ಹೊಟೇಲ್ ವಿಶೇಷ ರೀತಿಯಲ್ಲಿ ಕೇಕ್ ಅನ್ನು ಸಿದ್ಧ ಪಡಿಸಿತ್ತು. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೇಕ್ ಕತ್ತರಿಸಿ ಖುಷಿ ಪಟ್ಟರು.
ಹೊಟೇಲ್ನಲ್ಲಿ ಕೆಲ ಕಾಲ ವಿಶ್ರಮಿಸಿದ ಬಳಿಕ ರೋಹಿತ್ ಪಡೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಪ್ರಯಾಣ ಬೆಳೆಸಿತು. ಈಗಾಗಲೇ ಟೀಮ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿ ಭೇಟಿ ನಿವಾಸಕ್ಕೆ ಭೇಟಿ ನೀಡಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬ ಆಟಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಇದೇ ವೇಳೆ ತಂಡದ ಜೊತೆ ಔತಣಕೂಟ ಏರ್ಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನಿವಾಸಕ್ಕೆ ಟೀಮ್ ಇಂಡಿಯಾ ತಲುಪಿತು. ಈ ಸಭೆ ಮುಗಿದ ನಂತರ ಮುಂಬೈನಲ್ಲಿ ನಡೆಯಲಿರುವ ವಿಜಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಭಾರತ ತಂಡದ ಆಟಗಾರರು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ.