ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್- ಧನಶ್ರೀ ವರ್ಮಾ ವಿಚ್ಛೇದನ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ನಡುವೆ ಚಹಲ್ ತಮ್ಮ ಪತ್ನಿಯನ್ನು ಎಷ್ಟು ಪ್ರೀಸುತ್ತಿದ್ದರು ಅನ್ನುವ ಕಥೆಯನ್ನು ಜೆರ್ಸಿಯೊಂದು ರಿವೀಲ್ ಮಾಡಿದೆ. ಚಹಲ್ ಮನದಾಳದ ಪ್ರೀತಿ ಕಥೆಯನ್ನುಈ ಜೆರ್ಸಿಯೇ ತಿಳಿಸುತ್ತದೆ.
ಭಾರತದ ಕ್ರಿಕೆಟಿಗ ಸ್ಪನ್ನರ್ ಯುಜುವೇಂದ್ರ ಚಹಲ್ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಇವರ ದಾಂಪತ್ಯ ಜೀವನದ ಬಂಡಿ ಹಳಿ ತಪ್ಪಿದ್ದು, ಚಹಲ್ ಮತ್ತು ಧನಶ್ರೀ ಇಬ್ಬರು ಕೂಡ ದೂರವಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಇಬ್ಬರೂ ದೂರವಾಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ.
ಚಹಲ್- ಧನಶ್ರೀ ಪರಸ್ಪರ ದೂರವಾದ ನಂತರ, ಚಹಲ್ ಅವರು ತಮ್ಮ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ಧನಶ್ರೀ ಜೊತೆಗಿದ್ದ ಎಲ್ಲಾ ಫೋಟೋ- ವಿಡಿಯೋಸ್ನ್ನ ಡಿಲೀಟ್ ಮಾಡಿದ್ದಾರೆ. ಎಲ್ಲಾ ಫೋಟೋ ಡಿಲೀಟ್ ಮಾಡಿದ್ದು, ಇದೊಂದು ಫೋಟೋ ಮಾತ್ರ ಸಖತ್ ವೈರಲ್ ಆಗ್ತಿದೆ. ಇದೇ ಫೋಟೋ ಚಹಲ್ ಮನದಾಳದ ಪ್ರೇಮ ಕಥೆಯನ್ನು ಹೇಳುತ್ತಿದೆ.
ಟೀಂ ಇಂಡಿಯಾದ ಬಿಟ್ಟು ಚಹಲ್ ಇಂಗ್ಲೆಂಡ್ಗೆ ಕೌಂಟಿ ಆಡೋಕೆ ತೆರಳಿದ್ದು ನಿಮಗೆ ಗೊತ್ತಿದೆ. ಅಲ್ಲಿ ಕೆಂಟ್ ಪರ ಕಣಕ್ಕಿಳಿದ ಚಹಲ್ಗೆ ಯಾವಾಗಲೂ 3ನೇ ನಂಬರಿನ ಜೆರ್ಸಿ ಸಿಕ್ಕಿರಲಿಲ್ಲ. ಬೇರೆ ಯಾರೋ ಆ ನಂಬರ್ ತೆಗೆದುಕೊಂಡಿದ್ರಿಂದ, ಹೊಸ ನಂಬರ್ ಪಡೆದುಕೊಳ್ಳುವಂತೆ ಕೇಳಲಾಗಿತ್ತು. ಆಗ ಚಹಲ್ ಆಯ್ಕೆ ಮಾಡಿದ್ದು ನಂಬರ್ 27. ಇದು ಧನಶ್ರೀ ವರ್ಮಾ ಹುಟ್ಟಿದ ದಿನಾಂಕ. ಅವರು 1996 ನವೆಂಬರ್ 27 ರಂದು ಜನಿಸಿದ್ದಾರೆ. ಪತ್ನಿಯ ಮೇಲಿನ ಪ್ರೀತಿಯಿಂದ ಚಹಲ್ ಈ ನಂಬರ್ ಜೆರ್ಸಿ ಆಯ್ಕೆ ಮಾಡಿ ಕೌಂಟಿ ಕ್ರಿಕೆಟ್ ಆಡಿದರು. ಆದರೆ ಈಗ, ಆ ಜೆರ್ಸಿ ಹಾಗೇ ಉಳಿದಿದೆ. ಇಬ್ಬರ ನಡುವಿನ ಪ್ರೀತಿ ಉಳಿದಿಲ್ಲ.