ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನ ಫೈನಲ್ನಿಂದ ಹೊರಬಿದ್ದಿದ್ದಾರೆ. 50 ಕೆಜಿ ವಿಭಾಗದ ಫೈನಲ್ಗೆ ತಲುಪಿದ್ದ ವಿನೇಶ್ ಫೋಗಟ್, ಪ್ರಶಸ್ತಿ ಪಂದ್ಯಕ್ಕೂ ಮುನ್ನ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರಿಂದ ಅವರನ್ನು ಕ್ರೀಡಾಕೂಟದಿಂದ ಅನರ್ಹಗೊಳಿಸಲಾಗಿದೆ.
ಇಡೀ ದೇಶವೇ ವಿನೇಶ್ ಜೊತೆ ನಿಂತಿದೆ. ಪ್ರಧಾನಿ ಮೋದಿ ಕೂಡ ವಿನೇಶ್ ಬೆಂಬಲಕ್ಕೆ ಬಂದಿದ್ದು, ಸರ್ಕಾರದಿಂದ ಸಾಧ್ಯವಾಗುವುದೆಲ್ಲವನ್ನು ಮಾಡುವಾಗಿ ಭರವಸೆ ನೀಡಿದ್ದಾರೆ. ಇದೆಲ್ಲದರ ನಡುವೆ ವಿನೇಶ್ ಫೋಗಟ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಪ್ರಸ್ತುತ ಪ್ಯಾರಿಸ್ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಿರ್ಜಲೀಕರಣದಿಂದಾಗಿ ವಿನೇಶ್ ಅವರನ್ನು ಕ್ಲಿನಿಕ್ಗೆ ಕರೆದೊಯ್ಯಲಾಗಿದೆ. ವಿನೇಶ್ ಕ್ಲಿನಿಕ್ಗೆ ದಾಖಲಾಗಿರುವ ಸುದ್ದಿ ತಿಳಿದ ನಂತರ ಪಿಟಿ ಉಷಾ ಮತ್ತು ಭಾರತೀಯ ಅಧಿಕಾರಿಗಳ ತಂಡ ಅವರನ್ನು ಭೇಟಿ ಮಾಡಲು ಅಲ್ಲಿಗೆ ತೆರಳಿದೆ ಎಂಬ ಮಾಹಿತಿ ತಿಳಿದುಬಂದಿದೆ.
ವಿನೇಶ್ ಫೋಗಟ್ ನಿರ್ಜಲೀಕರಣದಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ತೂಕ ಇಳಿಸಿಕೊಳ್ಳಲು ವಿನೇಶ್ ಮಾಡಿದ ಪ್ರಯತ್ನದಿಂದ ಅವರು ನಿರ್ಜಲೀಕರಣಗೊಂಡಿದ್ದಾರೆ. ವಾಸ್ತವವಾಗಿ, ವಿನೇಶ್ ತನ್ನ ತೂಕವನ್ನು ಕಡಿಮೆ ಮಾಡಲು ಇಡೀ ರಾತ್ರಿ ಶ್ರಮಿಸಿದ್ದು, ಅವರು ನೀರನ್ನು ಕುಡಿಯದ ಕಾರಣ ಹೀಗಾಗಿದೆ ಎಂದು ಹೇಳಲಾಗುತ್ತಿದೆ.