- ಆನ್ಲೈನ್ ದೋಖಾ 60 ಭಾರತೀಯರ ಬಂಧನ
- ಶ್ರೀಲಂಕಾ ಸೈಬರ್ಕ್ರೈಂ ಪೊಲೀಸರಿಂದ ಅರೆಸ್ಟ್
- ಬಂಧಿತ ಭಾರತೀಯರ ವಿರುದ್ಧ ತನಿಖೆ ಚುರುಕು
ಆನ್ಲೈನ್ ವಂಚನೆ ಆರೋಪದಡಿ 60 ಜನ ಭಾರತೀಯರನ್ನ ಶ್ರೀಲಂಕಾದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ 158 ಮೊಬೈಲ್, 16 ಲ್ಯಾಪ್ಟಾಪ್, 60 ಕಂಪ್ಯೂಟರ್ಗಳನ್ನು ಲಂಕಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದರೆ ಹಣ ನೀಡುವುದಾಗಿ ವಾಟ್ಸಾಪ್ ನಲ್ಲಿ ಸಂದೇಶ ಕಳಿಸಿ, ಆಸಕ್ತಿ ತೋರಿದವರಿಂದ ಠೇವಣಿ ಹಣ ಪಡೆಯುತ್ತಿದ್ದರು. ಇದಕ್ಕೆ ಸ್ಥಳೀಯನೊಬ್ಬನ ಬೆಂಬಲವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಂದ ವಂಚನೆಗೊಳಗಾದ ಯುವಕನೊಬ್ಬ ಪೋಲಿಸರಿಗೆ ದೂರು ನೀಡಿದ್ದ. ಪೊಲೀಸರು ಐಪಿ ಅಡ್ರೆಸ್ ಆಧರಿಸಿ ನೆಗೊಂಬೊ ಪ್ರದೇಶದ ಐಷಾರಾಮಿ ಮನೆ ಮೇಲೆ ದಾಳಿ ಮಾಡಿದಾಗ, ಅಲ್ಲಿ ಸಿಕ್ಕ 13 ಜನರು ಬೇರೆಯವರ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳು ದುಬೈ, ಆಫ್ಘಾನಿಸ್ತಾನ ಮುಂತಾದ ದೇಶಗಳಲ್ಲಿರುವ ವಂಚಕರ ಜೊತೆ ಸಂಪರ್ಕ ಹೊಂದಿದ್ದರೆಂಬ ಮಾಹಿತಿ ಹೊರಬಿದ್ದಿದೆ.