ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲ ನೇತೃತ್ವದಲ್ಲಿ ಎನ್ಸಿ ಸರ್ಕಾರ ರಚನೆಯಾದ ಬಳಿಕ ಮೊದಲ ಅಧಿವೇಶನ ನಡೆದಿದೆ. ಅಧಿವೇಶನ ಮೊದಲ ದಿನವೇ ರಾಜ್ಯತ್ವ ಮರುಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾಹಲ ಏರ್ಪಟ್ಟಿದೆ.
ಅಧಿವೇಶನದ ಮೊದಲ ದಿನವೇ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಶಾಸಕ ವಹೀದ್ ಪಾರಾ ಅವರು ಆರ್ಟಿಕಲ್ 370 ರದ್ದತಿಯನ್ನು ವಿರೋಧಿಸಿ ಮತ್ತು ಕೇಂದ್ರಾಡಳಿತ ಪ್ರದೇಶದ ವಿಶೇಷತೆಯನ್ನು ಮರುಸ್ಥಾಪಿಸುವಂತೆ ನಿರ್ಣಯವನ್ನು ಮಂಡಿಸಿದರು.
ಅಜೆಂಡಾದ ಭಾಗವಾಗಿಲ್ಲದಿದ್ದರೂ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ವಿನಂತಿಸಿದರು, ಸದನದ ಕಾರ್ಯಸೂಚಿಯನ್ನು ಅಂತಿಮಗೊಳಿಸಲಾಗಿದ್ದರೂ ಸ್ಪೀಕರ್ ಆಗಿ ನಿಮ್ಮ ಅಧಿಕಾರವು ನಿರ್ಣಯವನ್ನು ಸೇರಿಸಲು ಅವಕಾಶ ನೀಡುತ್ತದೆ ಎಂದು ನಾವು ನಂಬುತ್ತೇವೆ. ಏಕೆಂದರೆ ಇದು ಜನರ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಮನವಿಯಲ್ಲಿ ಹೇಳಿದರು.
ಇದನ್ನು ಓದಿ: ಪತಿ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ: ಗುರುಪ್ರಸಾದ್ ಪತ್ನಿ!
ನಿರ್ಣಯವನ್ನು ಸಲ್ಲಿಸಿದ ಬೆನ್ನಲ್ಲೇ 28 ಮಂದಿ ಬಿಜೆಪಿ ಶಾಸಕರು ಈ ಕ್ರಮವನ್ನು ವಿರೋಧಿಸಲು ಎದ್ದು ನಿಂತರು. ಇದು ವಿಧಾನಸಭೆಯೊಳಗೆ ಗದ್ದಲಕ್ಕೆ ಕಾರಣವಾಯಿತು. ವಿಧಾನಸಭೆ ನಿಯಮಗಳನ್ನು ಉಲ್ಲಂಘಿಸಿ ನಿರ್ಣಯ ತಂದಿದ್ದಕ್ಕಾಗಿ ಪಾರಾ ಅವರನ್ನು ಅಮಾನತುಗೊಳಿಸುವಂತೆ ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ ಒತ್ತಾಯಿಸಿದರು. ಪ್ರತಿಭಟನಾ ನಿರತ ಸದಸ್ಯರಿಗೆ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಸ್ಪೀಕರ್ ಪದೇ ಪದೇ ಮನವಿ ಮಾಡಿದರೂ ಅವರು ಧರಣಿ ಮುಂದುವರಿಸಿದರು.
ಇದನ್ನು ಓದಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿಗೆ ಹೆಚ್ಚಿದ ಭಾರೀ ಒತ್ತಡ!
ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಿರ್ಣಯಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ ಮತ್ತು ಇದು ಕ್ಯಾಮೆರಾಗಳಿಗೆ ಮಾತ್ರ ಎಂದು ಹೇಳಿದರು. ಸದನವು ಈ ವಿಷಯವನ್ನು ಹೇಗೆ ಚರ್ಚಿಸುತ್ತದೆ ಎಂಬುದನ್ನು ಯಾವುದೇ ಒಬ್ಬ ಸದಸ್ಯರು ನಿರ್ಧರಿಸುವುದಿಲ್ಲ. ನಿರ್ಣಯದ ಹಿಂದೆ ಸರಿಯಾದ ಉದ್ದೇಶವಿದ್ದರೆ ಅವರು ಮೊದಲು ನಮ್ಮೊಂದಿಗೆ ಚರ್ಚಿಸುತ್ತಿದ್ದರು ಎಂದು ಅವರು ಹೇಳಿದರು.
ಇದನ್ನು ಓದಿ: ಪಗಡೆ ಆಟದ ಮಹಿಮೆಯಲ್ಲಿ ಚೂರಾಯ್ತಾ ಮನಸ್ಸುಗಳು?
370 ನೇ ವಿಧಿಯನ್ನು ರದ್ದುಪಡಿಸಿದ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದ ಜನರು ಒಪ್ಪುವುದಿಲ್ಲ ನನ್ನ ಸರ್ಕಾರವು ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ. ಇದು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರು ಇಟ್ಟಿರುವ ನಂಬಿಕೆಯ ಪ್ರತಿಫಲವಾಗಿದೆ ಎಂದು ಒಮರ್ ಅಬ್ದುಲ್ಲ ಹೇಳಿದರು.