ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 17 ಜನರು ಇಂದು ಕೋರ್ಟ್ ಮುಂದೆ ಹಾಜರಾಗಿದ್ದರು. ಕೋರ್ಟ್ಗೆ ಬಂದ ನಟ ದರ್ಶನ್ ಹಾಗೂ ಪವಿತ್ರಾ ಗೌಡ 6 ತಿಂಗಳ ಬಳಿಕ ಮುಖಾಮುಖಿಯಾದರು. ಈ ವೇಳೆ ನ್ಯಾಯಲಯದಲ್ಲಿ ಕಣ್ಣೀರಿಟ್ಟ ಪವಿತ್ರಾಗೌಡ ಅವರನ್ನು ನಟ ದರ್ಶನ್ ಬೆನ್ನು ತಟ್ಟಿ ಸಂತೈಸಿದರು. ಆದರೆ, ಕೋರ್ಟ್ನಲ್ಲಿ ಎಲ್ಲ ಆರೋಪಿಗಳು ಹಾಜರಾಗಿದನ್ನು ಖಚಿತಪಡಿಸಿಕೊಂಡ 57 ಸಿಸಿಹೆಚ್ ನ್ಯಾಯಾಲಯವು ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿತು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ಆರಂಭಕ್ಕೂ ಮುನ್ನ ಪ್ರಕರಣದ ಎಲ್ಲಾ ಆರೋಪಿಗಳು ನ್ಯಾಯಲಯದ ಮುಂದೆ ಹಾಜರಾಗಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು.ಇಂದು ಪ್ರಕರಣದ ಎಲ್ಲ 17 ಆರೋಪಿಗಳು ಹಾಜರಾಗಿದ್ದರು. ಕೋರ್ಟ್ ಟ್ರಯಲ್ ಮುಕ್ತಾಯದವರೆಗೂ ಎಲ್ಲ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು. ಪ್ರತಿ ತಿಂಗಳು ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎಲ್ಲಾ ಆರೋಪಿಗಳ ಹೆಸರುಗಳನ್ನ ನ್ಯಾಯಲಯದ ಸಿಬ್ಬಂದಿ ಹಾಜರಿ ಕೂಗಿ ಖಾತರಿಪಡಿಸಿಕೊಳ್ಳಲಾಯಿತು.
ಇದೇ ವೇಳೆ ಕೋರ್ಟ್ನಲ್ಲಿ ಪವಿತ್ರಗೌಡ ಭಾವುಕಳಾಗಿ ಕಂಡು ಬಂದರು. ಈ ವೇಳೆ ನಟ ದರ್ಶನ್ ಸ್ವತಃ ಗೆಳತಿ ಪವಿತ್ರಾಗೌಡ ಬಳಿ ಹೋಗಿ ಬೆನ್ನು ತಟ್ಟಿ ಸಂತೈಸಿದರು.
ನಂತರ ಕೆಲ ಕಾಲ ಕೋರ್ಟ್ ಹಾಲ್ನಲ್ಲಿ ದರ್ಶನ್ ಪವಿತ್ರಾಗೌಡ ಮಾತುಕತೆ ಮಾಡಿದರು. ಆಗ ದರ್ಶನ್ ಕಿವಿಗೆ ಪವಿತ್ರಾಗೌಡ ಏನೋ ಹೇಳಿದ್ದು ಕಂಡು ಬಂದಿತು . ಆಗ ದರ್ಶನ್ ಬೆನ್ನು ತಟ್ಟಿ ಸಮಾಧಾನ ಮಾಡಿದರು. ಆಗ ಕೋರ್ಟ್ನಿಂದ ಫೆ.25ರಂದು ವಿಚಾರಣೆ ಮುಂದೂಡಿ ಮತ್ತೆ ಎಲ್ಲರೂ ಹಾಜರಾಗಲು ಸೂಚನೆ ನೀಡಲಾಯಿತು.
ಹೊರ ರಾಜ್ಯಕ್ಕೆ ಹೋಗಲು ಪವಿತ್ರಾಗೌಡ ಮನವಿ ಸಲ್ಲಿಕೆ:
ನಟಿ ಪವಿತ್ರಾಗೌಡ ಅವರು ಜಾಮೀನಿನ ಮೇಲೆ ಹೊರಗಿರುವುದರಿಂದ ನಮ್ಮ ಕಕ್ಷಿದಾರರು ಹೊರ ರಾಜ್ಯದ ಕೆಲವು ದೇವಾಲಯಗಳಿಗೆ ಹೋಗಬೇಕಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಹೊರ ರಾಜ್ಯಗಳಲ್ಲಿರುವ ದೇವಾಲಯಗಳಿಗೆ ಹೋಗಿ ಬರಲು ಅವಕಾಶ ನೀಡಬೇಕು ಎಂದು ಪವಿತ್ರಾಗೌಡ ಪರ ವಕೀಲರು ಕೋರ್ಟ್ಗೆ ಮನವಿ ಸಲ್ಲಿಕೆ ಮಾಡಿದರು. ಈ ಕುರಿತ ಅರ್ಜಿಯನ್ನು ವಿಚಾರಣೆ ಮಾಡಿ ನ್ಯಾಯಾಲಯ ಪವಿತ್ರಾಗೌಡ ಅವರಿಗೆ ಅನುಮತಿ ನೀಡಿದೆ, ನ್ಯಾಯಾಲಯದಲ್ಲಿ ವಿಚಾರಣೆ ಪ್ರಕ್ರೀಯೆ ಮುಕ್ತಾಯವಾದ ಬಳಿಕ ಪವಿತ್ರಾಗೌಡ ಹಾಗೂ ನಟ ದರ್ಶನ ಸೇರಿದಂತೆ ಎಲ್ಲ ಆರೋಪಿಗಳು ನ್ಯಾಯಾಲಯದಿಂದ ಹೊರಬಂದರು.
ಮತ್ತೆ ಮೈಸೂರಿಗೆ ಹೋಗಲು ದರ್ಶನಗೆ ನ್ಯಾಯಾಲಯದ ಅನುಮತಿ
ಇದೇ ವೇಳೆ ನಟ ದರ್ಶನ್ ಅವರು ಮತ್ತೆ ಮೈಸೂರಿಗೆ ಹೋಗಲು ಅವಕಾಶ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ರು. ನಟ ದರ್ಶನ ಅವರ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಜನವರಿ 12 ರಿಂದ 5 ದಿನಗಳ ಕಾಲ ಮೈಸೂರಿಗೆ ತೆರಳಲು ನ್ಯಾಯಾಲಯ ಅನುಮತಿ ನೀಡಿ ಆದೇಶಿಸಿದೆ. ನಟ ದರ್ಶನ ಈ ಭಾರಿ ಸಂಕ್ರಾತಿ ಹಬ್ಬವನ್ನ ಮೈಸೂರಿನ ತಮ್ಮ ಪಾರ್ಮಹೌಸ್ ನಲ್ಲೆ ಆಚರಿಸಲಿದ್ದು. ತಮ್ಮ ಪಾರ್ಮಹೌಸ್ ನ ರಾಸುಗಳ ಜೊತೆ ಸಂಕ್ರಾತಿ ಕಿಚ್ಚು ಹಾಯಿಸಲಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಮೈಸೂರಿನಲ್ಲೆ ತಾಯಿ ಹಾಗೂ ಕುಟುಂಬದೊಂದಿಗೆ ನಟ ದರ್ಶನ್ ಸಂಕ್ರಾಂತಿ ಹಬ್ಬ ಆಚರಿಸುತ್ತಿರುವುದು ವಿಶೇಷವಾಗಿದೆ.