ಬೆಂಗಳೂರು: ರಾಜ್ಯದ 30 ಕಡೆಗಳಲ್ಲಿ ಇಂದು (ಬುಧವಾರ) ಬೆಳಗ್ಗೆ 5 ಗಂಟೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೃಹತ್ ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ಆರ್.ಟಿ.ನಗರ, ಇಳವಾಲ, ರಾಮಕೃಷ್ಣ ನಗರ ಸೇರಿದಂತೆ ಹಲವೆಡೆ ಉದ್ಯಮಿಗಳು, ಬಿಲ್ಡ್ರ್ಗಳ ಮನೆ, ಕಚೇರಿ, ಕಲ್ಯಾಣ ಮಂಟಪಗಳಲ್ಲಿ ಶೋಧನೆ ಕಾರ್ಯಾಚರಣೆ ನಡೆಸಲಾಗಿದೆ.
ದೆಹಲಿ, ಚೆನೈ, ಗೋವಾ, ಕೋಲ್ಕತ್ತಾದಿಂದ ಬಂದ ಅಧಿಕಾರಿಗಳು 90ಕ್ಕೂ ಹೆಚ್ಚು ವಾಹನಗಳಲ್ಲಿ ಸಜ್ಜಾಗಿ ಭ್ರಷ್ಟಾಚಾರ ಮತ್ತು ತೆರಿಗೆ ವಂಚನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಈ ದಾಳಿಯ ವಿಶೇಷತೆ?
ಮಾಹಿತಿ ಸೋರಿಕೆಯನ್ನು ತಡೆಗಟ್ಟಲು ವಾಹನಗಳನ್ನು ಮದುವೆ ಸಮಾರಂಭದ ಕಾರುಗಳಂತೆ ಸಿಂಗರಿಸಿಕೊಂಡು ಬಂದು ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಐಟಿ ದಾಳಿ ನಡೆದಿದ್ದು ಮನೆ ಕಚೇರಿಗಳ ಶೋಧ ಕಾರ್ಯ ನಡೆಸಿದ್ದಾರೆ. ಮದುವೆ ಸಮಾರಂಭಕ್ಕೆ ಹೋಗುವ ರೀತಿ ಕಾರ್ ಗಳನ್ನು ಸಿಂಗರಿಸಿಕೊಂಡು ಬಂದು ದಾಳಿ ನಡೆಸಲಾಗಿದೆ. ಮಾಹಿತಿ ಸೋರಿಕೆಯಾದ ಹಿನ್ನಲೆಯಲ್ಲಿ ಮದುವೆಗೆ ಹೋಗುವ ಕಾರ್ ರೀತಿ ಸಿಂಗರಿಸಿ ದಾಳಿ ನಡೆಸಲಾಗಿದೆ.
ಆದಾಯ ತೆರಿಗೆ ವಂಚನೆ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ದೆಹಲಿ, ಚೆನೈ, ಗೋವಾ,ಕೋಲ್ಕತ್ತಾದಿಂದ ಅಧಿಕಾರಿಗಳು ಬಂದಿದ್ದಾರೆ. ಬೆಳಗ್ಗೆ 5 ಗಂಟೆಗೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು ಭ್ರಷ್ಟರಿಗೆ ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc