ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಬಿವೈ ವಿಜಯೇಂದ್ರ ಅವರು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ 150 ಕೋಟಿ ರೂ. ಆಮಿಷವೊಡ್ಡಿದ ಆರೋಪಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿಜಯೇಂದ್ರ 150 ಕೋಟಿ ರೂಪಾಯಿ ಆಮಿಷವೊಡ್ಡಿರುವ ಬಗ್ಗೆ ಎಂದು ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿರುವುದು ಬಯಲಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದರು. ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಃ ಮಾಣಿಪ್ಪಾಡಿ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ಹೇಳಿರುವುದು 90 ಪ್ರತಿಶಕ ಸುಳ್ಳು. ಕಾಂಗ್ರೆಸ್ನವರೇ ಲಂಚದ ಆಮಿಷವೊಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗಾದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಜಯೇಂದ್ರ ಮೇಲೆ ಸುಳ್ಳು ಆರೋಪ ಮಾಡಿದರೆ ಎನ್ನುವ ಪ್ರಶ್ನೆ ಉದ್ಭವಿಸಿದೆ.
ವಿಜಯೇಂದ್ರ ವಿರುದ್ಧ ಸುಳ್ಳು ಆರೋಪ ಮಾಡಿದ್ರಾ ಸಿದ್ದರಾಮಯ್ಯ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಏಕೆಂದರೆ ವಕ್ಫ್ ಆಸ್ತಿ ಕಬಳಿಕೆ ವಿವಾದಕ್ಕೆ ಅನ್ವರ್ ಮಾಣಿಪ್ಪಾಡಿ ಟ್ವಿಸ್ಟ್ ಕೊಟ್ಟಿದ್ದಾರೆ. ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಬಿವೈ ವಿಜಯೇಂದ್ರ ಅವರು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ 150 ಕೋಟಿ ರೂ. ಆಮಿಷವೊಡ್ಡಿದ ಆರೋಪಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿಜಯೇಂದ್ರ ವಿರುದ್ಧ ಸಿದ್ದರಾಮಯ್ಯ ಹೇಳಿಕೆ 100% ಸುಳ್ಳು ಎಂದು ಮಾಣಿಪ್ಪಾಡಿ ಹೇಳಿಕೆ ನೀಡಿದ್ದಾರೆ.
2012-13ರಲ್ಲಿ ವಿಜಯೇಂದ್ರ ಯಾರು ಅಂತಾನೇ ಗೊತ್ತಿರಲಿಲ್ಲ. ಕಾಂಗ್ರೆಸ್ನವರಿಂದಲೇ ವಕ್ಫ್ ವರದಿ ರಿಲೀಸ್ ಮಾಡದಂತೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ವಕ್ಫ್ ವರದಿ ತಯಾರಿಸಿದ್ದ ಅನ್ವರ್ ಮಾಣಿಪ್ಪಾಡಿ ಅವರಿಂದ ಈ ಸ್ಫೋಟಕ ಹೇಳಿಕೆ ಹೊರ ಬಿದ್ದಿದೆ. ವರದಿ ಬಹಿರಂಗಪಡಿಸದಂತೆ ವಿಜಯೇಂದ್ರ ಆಮಿಷವೊಡ್ಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು.
ಈಗ ಸಿಎಂಸಿದ್ದರಾಮಯ್ಯ ಆರೋಪಗಳನ್ನು ಸ್ಪಷ್ಟವಾಗಿ ಮಾಣಿಪ್ಪಾಡಿ ಅವರು ನಿರಾಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಆರೋಪ ಸುಳ್ಳು ಎಂದು ವಿಜಯೇಂದ್ರ ಕೂಡ ಟೀಕಿಸಿದ್ದರು. ವರದಿ ಜಾರಿಗಾಗಿ ಪ್ರಧಾನಿಗೆ ಪತ್ರ ಬರೆದಿದ್ದು ನಿಜ. ಆದರೆ ಆಮಿಷ ಆರೋಪ ಸುಳ್ಳು. ಸಿಎಂ ಆರೋಪ ನಿರಾಕರಿಸಿ ಅನ್ವರ್ ಮಾಣಿಪ್ಪಾಡಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ನ ಹಲವು ನಾಯಕರು ವರದಿ ಬಹಿರಂಗ ಮಾಡದಂತೆ ಆಮಿಷವೊಡ್ಡಿದ್ದರು, ಬಿಜೆಪಿಯಿಂದ ಯಾವುದೇ ನಾಯಕರಿಂದಲೂ ಆಮಿಷ ಬಂದಿಲ್ಲ, ನನ್ನ ವರದಿಯನ್ನು ಸಿಬಿಐಗೆ ಕೊಟ್ಟರೆ ಕಾಂಗ್ರೆಸ್ ಬುಡಕ್ಕೆ ಬರುತ್ತದೆ. ಹೀಗಾಗಿ ವರದಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವಕ್ಫ್ ವಿವಾದಕ್ಕೆ ಸ್ಫೋಟಕ ತಿರುವು ಕೊಟ್ಟಿದ್ದಾರೆ ಮಾಣಿಪ್ಪಾಡಿ.