ಬಿಡುಗಡೆಯಾದ ದಿನದಿಂದಲೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬಾಲಿವುಡ್ನ ಹಾರರ್, ಕಾಮಿಡಿ ಸಿನಿಮಾ ಸ್ತ್ರೀ-2 ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 586 ಕೋಟಿ ರುಪಾಯಿ ಸಂಪಾದಿಸಿದೆ. ಈ ಮೂಲಕ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮರ್ ಕೌಶಿಕ್ ನಿರ್ದೇಶನದ, ರಾಜ್ಕುಮಾರ್ರಾವ್ ಮತ್ತು ಶ್ರದ್ದಾ ಕಪೂರ್ ಅಭಿನಯದ ಈ ಸಿನಿಮಾ ಆಗಸ್ಟ್ 15ರಂದು ತೆರೆಕಂಡಿತ್ತು. ಇದುವರೆಗೆ ಜವಾನ್ ಚಿತ್ರ ಹೊಂದಿದ್ದ ಗರಿಷ್ಠ ಗಳಿಕೆಯ ಹಿಂದಿ ಸಿನೆಮಾದ ದಾಖಲೆಯನ್ನು ಸ್ತ್ರೀ-2 ಮುರಿದಿದೆ. ಇದರ ಮೊದಲ ಭಾಗ ಸ್ತ್ರೀ ಚಿತ್ರ 2018ರಲ್ಲಿ ಬಿಡುಗಡೆಯಾಗಿತ್ತು.