ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಸರ್ಕ್ಯೂಟ್ ನಲ್ಲಿ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಸುಮಿತ್ ಕುಮಾರ್ ಗಾರ್ಗ್ ಕಂಚಿನ ಪದಕವನ್ನು ಗೆದ್ದಿದ್ದಾರೆ. ಬೆಂಗಳೂರು ಮೂಲದವರಾದ ಸುಮಿತ್ 1992 ಆಗಸ್ಟ್ 16ರಂದು ಜನಿಸಿದರು. ಇವರು BWF ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ 2017 ಮತ್ತು 2019ರಲ್ಲಿ ಎರಡು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದೀಗ 2024 ಡಿಸೆಂಬರ್ 11ರಿಂದ 15 ರವರೆಗೇ ಬಹ್ರೇನ್ನ ಮನಾಮದಲ್ಲಿ ನಡೆದ “ಲೆವೆಲ್ 1” ಪಂದ್ಯಾವಳಿಯಾದ ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಸರ್ಕ್ಯೂಟ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಸುಮಿತ್ ಹಾಗೂ ಜೊತೆಯಲ್ಲಿ ಆಟವಾಡಿದ ಶಾಹೀರ್ ಇಬ್ಬರೂ ಮಲೇಷಿಯಾದಲ್ಲಿ ನಡೆದ ಪ್ಯಾರಾಲಿಂಪಿಯನ್ ಸೆಮಿಫೈನಲ್ನಲ್ಲಿ 19-21, 11-21 ಅಂಕಗಳೊಂದಿಗೆ ನಂ 1 ಪಟ್ಟದಿಂದ ವಂಚಿತರಾಗಿದ್ದರು. ಸುಮಿತ್ ಅವರು SU5 ವರ್ಗದಲ್ಲಿ ತಮ್ಮ ಆಟ ಆಡುತ್ತಾರೆ.
ಕಂಚಿನ ಪದಕ ಗೆದ್ದ ಸುಮಿತ್ ಅವರಿಗೆ ಇದು ನಾಲ್ಕನೇ ಅಂತಾರಾಷ್ಟ್ರೀಯ ಪದಕವಾಗಿದ್ದು, ಇದರ ಜೊತೆಗೆ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪದಕಗಳನ್ನು ಕೂಡ ಗೆದ್ದಿದ್ದಾರೆ. ಸುಮಿತ್ ಅವರು ಈಗ ಬಹ್ರೇನ್ನ ಕಂಚಿನ ಪದಕ ಜಯಿಸುವ ಮೂಲಕ ತಮ್ಮ ವೃತ್ತಿ ಜೀವನದಲ್ಲೆ ಅತ್ಯುತ್ತಮ ವಿಶ್ವ 14 Rank ಅನ್ನು ತಲುಪಿದ್ದಾರೆ. ಸುಮಿತ್ ಅವರು ಬೆಂಗಳೂರಿನ ನಿವಾಸಿಯಾಗಿದ್ದು, ಪ್ರಸ್ತುತ ಥಾಮ್ಸನ್ ರಾಯಿಟರ್ಸ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.