ಟಿ20 ವಿಶ್ವಕಪ್ನಲ್ಲಿ ಎಲ್ಲಾ ತಂಡಗಳು ಗುರಿ ಒಂದೇ. ಕಪ್ ಗೆಲ್ಲೋದು. ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಆದ್ರೆ ಪಾಕಿಸ್ತಾನದ ಗುರಿ ಮಾತ್ರ ಟೀಮ್ ಇಂಡಿಯಾವನ್ನ ಸೋಲಿಸೋದು. . ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ರಿಕೆಟರ್ಸ್ ಕೂಡ ಭಾರತದ ಸೋಲಿಗೆ ಪಣತೊಟ್ಟಿದ್ದಾರೆ.
ಜೂನ್ 9 ರಂದು ಟಿ20 ವಿಶ್ವಕಪ್ ರಣರಂಗದಲ್ಲಿ ಜಾತ್ರೆ ನಡೆಯಲಿದೆ. ಕ್ರಿಕೆಟ್ ಬದ್ಧವೈರಿಗಳು ಅಖಾಡದಲ್ಲಿ ಎದುರಾಗಲಿದ್ದಾರೆ. ಬಲಿಷ್ಠ ಭಾರತ ತಂಡ ಪಾಕಿಸ್ತಾನ ಎದುರಿಸಲಿದ್ದು, ಈ ಬಿಗ್ ಬ್ಯಾಟಲ್ಗೆ ಇನ್ನೂ 3 ದಿನಗಳಷ್ಟೇ ಬಾಕಿ ಇದ್ದು ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಕುಂತ್ರೂ, ನಿಂತ್ರೂ ಜೂನ್ 9ರ ಮ್ಯಾಚ್ದೇ ಚಿಂತೆ..!
ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಯಾಕಂದ್ರೆ ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ಪಾಕ್ ಯಾವೂದರಲ್ಲೂ ಸಾಟಿನೇ ಆಗಿಲ್ಲ.
T20 ವಿಶ್ವಕಪ್ ಗೆಲ್ಲದಿದ್ರೂ ಪರ್ವಾಗಿಲ್ಲ
ಈ ಎರಡು ಲೈನ್ಗಳೇ ಸಾಕು. ಪಾಕಿಸ್ತಾನಿ, ಟೀಮ್ ಇಂಡಿಯಾ ಎದುರಿನ ಮ್ಯಾಚ್ ಬಗ್ಗೆ ಎಷ್ಟೊಂದು ಗಂಭೀರವಾಗಿ ಚಿಂತಿಸ್ತಿದೆ ಅನ್ನೋದಕ್ಕೆ. ಹಾಲಿ ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ಯಾಪ್ಟನ್ ಕೂಡ ಭಾರತ ತಂಡದ ಸೋಲಿಗೆ ಟೊಂಕಕಟ್ಟಿ ನಿಂತಿದ್ದಾರೆ. ನೀವು ವಿಶ್ವಕಪ್ ಗೆಲ್ತಿರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಯಾವುದೇ ಕಾರಣ್ಕಕೂ ಮಾತ್ರ ಟೀಮ್ ಇಂಡಿಯಾ ವಿರುದ್ಧ ಸೋಲಬೇಡಿ ಎಂದು ಪಾಕ್ ಮಾಜಿ ಕ್ಯಾಪ್ಟನ್ ರಮೀಜ್ ರಾಜಾ ಹೇಳಿದ್ದಾರೆ.
ಭಾರತ ವಿರುದ್ಧ ಸೋಲಬೇಡಿ
ನೀವು ವಿಶ್ವಕಪ್ ಗೆಲ್ಲುತ್ತಿರೋ ಅಥವಾ ಸೋಲುತ್ತಿರೋ ಅದು ಮುಖ್ಯವಲ್ಲ. ಆದ್ರೆ ಯಾವುದೇ ಕರಣಕ್ಕೂ ಟೀಮ್ ಇಂಡಿಯಾ ವಿರುದ್ಧ ಮಾತ್ರ ಸೋಲಬೇಡಿ.
ರಮೀಜ್ ರಾಜಾ, ಮಾಜಿ ಕ್ಯಾಪ್ಟನ್
ಭಾರತವನ್ನ ಮಣಿಸಲು ನಾಯಕ ಬಾಬರ್ ಕನವರಿಕೆ
ಬರೀ ಮಾಜಿ ಕ್ಯಾಪ್ಟನ್ ಮಾತ್ರವಲ್ಲ. ಹಾಲಿ ಕ್ಯಾಪ್ಟನ್ ಬಾಬರ್ ಅಝಂ ಕೂಡ ಟೀಮ್ ಇಂಡಿಯಾವನ್ನ ಸೋಲಿಸಲು ಹಗಲು ರಾತ್ರಿ ಕನವರಿಸ್ತಿದ್ದಾರೆ. ಆಟಗಾರರಿಗೆ ಭಾರತ ವಿರುದ್ಧ ಗೆಲ್ಲಲು ಪಾಠ ಮಾಡಿ, ಹುರಿದುಂಬಿಸಿದ್ದಾರೆ. ಜಗತ್ತಿನ ಯಾವ ಮೂಲೆಗೂ ಹೋದರೂ ಭಾರತ-ಪಾಕ್ ಪಂದ್ಯದ ಬಗ್ಗೆ ಚರ್ಚೆ ನಡೆಯುತ್ತೆ. ಪ್ರತಿಯೊಬ್ಬರು ಅವರವರ ದೇಶಕ್ಕೆ ಸಪೋರ್ಟ್ ಮಾಡ್ತಾರೆ.
ಪಾಕ್ ತಿರುಕನ ಕನಸಿಗೆ ತಣ್ಣೀರೆರೆಚುತ್ತಾ ಟೀಮ್ ಇಂಡಿಯಾ..?
ಯಾಕಂದ್ರೆ ಟೀಮ್ ಇಂಡಿಯಾ, ಪಾಕ್ ವಿರುದ್ದ ವಿಶ್ವಕಪ್ನಲ್ಲಿ ಇಲ್ಲಿತನಕ ಒಮ್ಮೆ ಮಾತ್ರ ಸೋತಿದೆ. ಆರು ಪಂದ್ಯಗಳಲ್ಲಿ ಪಾರಮ್ಯ ಮೆರೆದಿದೆ. ಇದೇ ಹುಮ್ಮಸ್ಸಿನಲ್ಲಿ ಭಾನುವಾರದ ದಂಗಲ್ನಲ್ಲಿ ಮತ್ತೊಮ್ಮೆ ಪಾಕ್ ಸೊಲ್ಲಡಗಿಸಿದ್ರು ಅಶ್ಚರ್ಯವಿಲ್ಲ.