- ಭಾರತ ವಿರುದ್ಧ ಯುಎಸ್ಎ ಸೆಣಸಾಟ
- ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ
ಭಾರತ ವಿರುದ್ಧ ಯುಎಸ್ಎ ಸೆಣಸಾಡಲು ವೇದಿಕೆ ಸಿದ್ಧವಾಗಿದೆ. ಇಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವು ಟೀಂ ಇಂಡಿಯಾ ವರ್ಸಸ್ ಮಿನಿ ಇಂಡಿಯಾ ಕದನವಾಗಿದೆ.
ಮಿನಿ ಇಂಡಿಯಾ ಅಂದರೆ ಯುಎಸ್ಎ ತಂಡದಲ್ಲಿ 8 ಮಂದಿ ಭಾರತೀಯರಿದ್ದಾರೆ. ಅಂದರೆ 15 ಸದಸ್ಯರ ಬಳಗದಲ್ಲಿ 8 ಜನ ಭಾರತೀಯ ಮೂಲದ ಆಟಗಾರರೇ ಆವರಿಸಿಕೊಂಡಿದ್ದಾರೆ.
ಹೀಗಾಗಿ ಇದು ಭಾರತ ಮತ್ತು ಮಿನಿ ಭಾರತ ನಡುವಿನ ಕದನ ಎಂದು ಕರೆಯುತ್ತಿದ್ದಾರೆ. ಈ ಹಿಂದೆ ಕೂಡ ಇವರಲ್ಲಿ ಕೆಲವರು ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದೀಗ ಈ ಆಟಗಾರರೇ ಭಾರತ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಯುಎಸ್ಎ ತಂಡದಲ್ಲಿ ಭಾರತೀಯ ಮೂಲದ ಆಟಗಾರರು
ಮೊನಾಂಕ್ ಪಟೇಲ್
ಸೌರಭ್ ನೇತ್ರವಾಲ್ಕರ್
ನಿತೀಶ್ ಕುಮಾರ್
ಹರ್ಮೀತ್ ಸಿಂಗ್
ಮಿಲಿಂದ್ ಕುಮಾರ್
ನಿಸರ್ಗ್ ಪಟೇಲ್
ಜಸ್ದೀಪ್ ಸಿಂಗ್
ನೊಷ್ತುಶ್ ಕೆಂಜಿಗೆ