ಈಗ ತಾನೇ ಕ್ರಿಕೆಟ್ ಲೋಕಕ್ಕೆ ಅಂಬೆಗಾಲಿಟ್ಟಿರುವ ನೂತನ ತಂಡಗಳು ಈ ಬಾರಿಯ ಟಿ-20 ವಿಶ್ವಕಪ್ನಲ್ಲಿ ಅದ್ಬುತ ಪ್ರದರ್ಶನ ತೋರುತ್ತಿವೆ. ಭಾನುವಾರದಿಂದ ಶುರುವಾದ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡ ಅಮೆರಿಕ ಟೂರ್ನಿಯ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ಐಪಿಎಲ್ನ ಹೈ ಸ್ಕೋರ್ ಪಂದ್ಯಗಳನ್ನು ನೆನಪಿಸುವಂತೆ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ತಂಡ ಕೆನಡಾವನ್ನು 7 ವಿಕೆಟ್ಗಳಿಂದ ಬಗ್ಗು ಬಡಿದು ಮಿರಾಕಲ್ ಸೃಷ್ಟಿಸಿದೆ.
ನಾವೆಲ್ಲ ಅಂದುಕೊಂಡಿರತ್ತಿವಿ ಹೇ..ಇವೆಲ್ಲಾ ಹೊಸ ಹೊಸ ತಂಡಗಳು ಕ್ರಿಕೆಟ್ನ ಗಂಧಗಾಳಿಯೂ ಗೊತ್ತಿಲ್ಲದ ತಂಡಗಳು ಇವೆನು ಆಡುತ್ತವೆ. ಸುಮ್ಮನೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಹ ತಂಡಗಳಂತೆಲ್ಲಾ ಅಂದು ಕೊಂಡಿರೇ ಅದು ಮಹಾನ್ ತಪ್ಪು. ಯಾಕಂದರೆ ಭಾನುವಾರ ಅಮೆರಿಕಾ, ಕೆನಡಾ ವಿರುದ್ಧ ಆಡಿದ್ದ ಆಟ ಹೆಂಗಿತ್ತು ಅಂದರೆ. ಪಾದಾರ್ಪಣೆ ಮ್ಯಾಚ್ಗಳಲ್ಲೆ ಓಳ್ಳೆ ಪ್ರೋಫೆಸ್ನಲಿಸ್ಟ್ ತಂಡಗಳು ಆಟ ಆಡಿದ ಹಾಗೇ ಆಡುತ್ತಿವೆ. ಈ ಮ್ಯಾಚ್ಗಳನ್ನಾ ಕ್ರಿಕೆಟ್ನ ದೊಡ್ಡ ದೊಡ್ಡ ತಂಡಗಳು ನೋಡಿ.. ಭಯಪಟ್ಟು ಈಗಾಗಲೇ ಅಂದುಕೊಳ್ಳತ್ತಿರಬಹುದು ಈ ತಂಡಗಳನ್ನಾ ಲೈಟ್ ಆಗಿ ತೆಗೆದುಕೊಂಡರೆ ನಮಗೆ ತಿಣುಕಾಡಿಸಿ ಬಿಡುತ್ತವೆ ಅಂತಾ…
ಭಾನುವಾರದ ಪಂದ್ಯದಲ್ಲಿ ಅಮೆರಿಕಾ ತಂಡ ಆಡಿದ ಆಟ ನೋಡೊದಾದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆನಡಾ ತಂಡ 5 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿತು. ಟಿ20 ವಿಶ್ವಕಪ್ನಲ್ಲಿ ಈ ಮೊತ್ತ ದೊಡ್ಡದೆನಿಸಿದರೂ ಅಮೆರಿಕ ಸುಲಭದಲ್ಲಿ ಬೆನ್ನತ್ತಿ ಗೆಲುವು ಸಾಧಿಸಿತು. ಅದರಲ್ಲಿ ಅಮೆರಿಕಾ ತಂಡದ ಪ್ಲೇಯರ್ ಆದ ಆ್ಯರೊನ್ ಜಾನ್ಸ್ರ ಸ್ಫೋಟಕ ಆಟ ದೊಡ್ಡ ಮೊತ್ತವನ್ನೂ ಸುಲಭವಾಗಿಸಿತು.
ಖಾತೆ ತೆರೆಯುವ ಮೊದಲೇ ಸ್ಟೀವನ್ ಟೇಲರ್ ಔಟಾದರೆ, ನಾಯಕ ಮೋನಕ್ ಪಟೇಲ್ ಗಳಿಕೆ ಕೇವಲ 16 ರನ್. ಹೀಗಾಗಿ ತಂಡಕ್ಕೆ ಉತ್ತಮ ಆರಂಭವೇನೂ ಸಿಗಲಿಲ್ಲ. 8 ಓವರ್ಗಳಲ್ಲಿ ತಂಡ ಕೇವಲ 48 ರನ್ ಗಳಿಸಿತ್ತು. ಆದರೆ ಬಳಿಕ ಆ್ಯಂಡ್ರೀಸ್ ಗೌಸ್ ಹಾಗೂ ಆ್ಯರೊನ್ ಜಾನ್ಸ್ ಮ್ಯಾಜಿಕ್ ಮಾಡಿದರು.
9ನೇ ಓವರ್ ಶುರುವಾಗುತ್ತಿದ್ದಂತೆಯೇ ಹೈಸ್ಪೀಡ್ ಆಟ ಶುರುವಿಟ್ಟ ಈ ಜೋಡಿ 3ನೇ ವಿಕೆಟ್ಗೆ 58 ಎಸೆತಗಳಲ್ಲಿ 131 ರನ್ ಚಚ್ಚಿತು. ಅದರಲ್ಲೂ ಜೆರೆಮಿ ಜಾರ್ಡನ್ ಎಸೆದ 14ನೇ ಓವರಲ್ಲಿ 33 ರನ್ ಹರಿದುಬಂತು. ಗೆಲುವಿನ ಸನಿಹದಲ್ಲಿ ಗೌಸ್(65) ಔಟಾದರೂ, ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಜಾನ್ಸ್ 40 ಎಸೆತಗಳಲ್ಲಿ 4 ಬೌಂಡರಿ, 10 ಸಿಕ್ಸರ್ನೊಂದಿಗೆ 94 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
20 ವಿಶ್ವಕಪ್ನ ಮೊದಲ ದಿನದ ಲೋ ಸ್ಕೋರ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ಇಂಡೀಸ್ ತಂಡ ಪಪುವಾ ನ್ಯೂ ಗಿನಿ ವಿರುದ್ಧ 5 ವಿಕೆಟ್ಗಳಿಂದ ರೋಚಕ ಗೆಲುವು ಸಾಧಿಸಿದೆ. ಮೊದಲ ದಿನವೇ ಬಲಿಷ್ಠ ತಂಡಕ್ಕೆ ಪಪುವಾ ನ್ಯೂ ಗಿನಿ ಸೋಲಿನ ಆಘಾತ ನೀಡುವ ನಿರೀಕ್ಷೆಯಲ್ಲಿದ್ದರೂ ವಿಂಡೀಸ್ ಅಲ್ಪದರಲ್ಲೇ ಪಾರಾಯಿತು.
ಮೊದಲು ಬ್ಯಾಟ್ ಮಾಡಿದ ಪಪುವಾ 8 ವಿಕೆಟ್ಗೆ 136 ರನ್ ಕಲೆಹಾಕಿತು. ಸೆಸೆ ಬವು 50 ರನ್ ಗಳಿಸಿದರೆ, ಕಿಪ್ಲಿನ್ ಡೊರಿಗಾ 27 ರನ್ ಕೊಡುಗೆ ನೀಡಿದರು. ಸುಲಭ ಗುರಿ ಸಿಕ್ಕರೂ ಪರದಾಡಿದ ವಿಂಡೀಸ್ 19 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಲು ತಿಣುಕಾಡಿ ಬಿಟ್ಟರು.
ಟಿ20 ವಿಶ್ವಕಪ್ನ 3ನೇ ಪಂದ್ಯದಲ್ಲಿ ನಮೀಬಿಯಾ ತಂಡ ಒಮಾನ್ ವಿರುದ್ಧ ಜಯ ಸಾಧಿಸಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯವು ಟೈನಲ್ಲಿ ಅಂತ್ಯ ಕಂಡಿತ್ತು. ಅದರಂತೆ ಸೂಪರ್ ಓವರ್ನತ್ತ ಸಾಗಿದ ಪಂದ್ಯದಲ್ಲಿ ನಮೀಬಿಯಾ ತಂಡ 11 ರನ್ಗಳ ರೋಚಕ ಜಯ ಸಾಧಿಸಿದೆ.