- ಬಾಂಗ್ಲಾದೇಶವನ್ನು ಎದುರಿಸಲು ರೋಹಿತ್ ಪಡೆ ಸಜ್ಜು
- ಟೀಂ ಇಂಡಿಯಾದಿಂದ ಸ್ಟಾರ್ ಬೌಲರ್ ಬುಮ್ರಾ ಹೊರಗುಳಿಸಲಿದ್ದಾರೆ
ಟಿ 20 ವಿಶ್ವಕಪ್ 2024 ರಲ್ಲಿ ಭಾಗವಾಗಿ ಟೀಂ ಇಂಡಿಯಾ ಇಂದು ಸೂಪರ್ 8ನಲ್ಲಿ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ಆ್ಯಂಟಿಗುವಾದಲ್ಲಿ ಬಾಂಗ್ಲಾದೇಶವನ್ನು ಎದುರಿಸಲು ರೋಹಿತ್ ಪಡೆ ಸಜ್ಜಾಗಿದೆ. ಇಂದು ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಭಾರತ ತಂಡ ಈ ಪಂದ್ಯವನ್ನು ಗೆದ್ದು ಸೆಮಿಸ್ ಹಾದಿ ತೆರವುಗೊಳಿಸುವ ಭರವಸೆ ಹೊಂದಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಅಘಾತ ಎದುರಾಗಿದೆ. ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶ ವಿರುದ್ಧದ ಪಂದ್ಯದಿಂದ ಹೊರಗುಳಿಸಲಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಬೌಲಿಂಗ್ ಪಡೆಯಲ್ಲಿ ಬುಮ್ರಾ ಮಿಸ್ ಆದ್ರೆ ಟೀಂ ಇಂಡಿಯಾ ತಂಡ ದುರ್ಬಲಾಗುವುದು ಖಚಿತ.
ಟಿ20 ವಿಶ್ವಕಪ್ನಲ್ಲಿ ಬುಮ್ರಾ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ತಮ್ಮ ತೀಕ್ಷ್ಣ ಬೌಲಿಂಗ್ನಿಂದ ಎದುರಾಳಿಯ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಆದರೆ ವೆಸ್ಟ್ ಇಂಡೀಸ್ ನಲ್ಲಿ ಸೂಪರ್ 8 ಪಂದ್ಯಗಳು ನಡೆಯುತ್ತಿದ್ದು, ಅಲ್ಲಿನ ಸ್ಥಳಗಳ ನಡುವಿನ ಅಂತರ ತುಂಬಾ ಹೆಚ್ಚಿದ್ದು, ಆಟಗಾರರು ಪ್ರಯಾಣಿಸಿ ಸುಸ್ತಾಗಿದ್ದಾರಂತೆ.
ಸದ್ಯ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕಾಗಿ ಆ್ಯಂಟಿಗುವಾಗೆ ತೆರಳಿದೆ. ಅಲ್ಲಿಂದ ಆಸ್ಟ್ರೇಲಿಯ ವಿರುದ್ಧದ ಕೊನೆಯ ಸೂಪರ್ 8 ಪಂದ್ಯಕ್ಕಾಗಿ ಸೇಂಟ್ ಲೂಸಿಯಾಗೆ ಹೋಗಬೇಕಿದೆ. ಸೆಮಿಸ್ ತಲುಪಿದರೆ ಮತ್ತೆ ಬೇರೆ ಕಡೆಗೆ ಪಯಣ ಮಾಡಬೇಕಾಗುತ್ತದೆ. ಇಂತಹ ಸರಣಿ ಟ್ರಿಪ್ಗಳಿಂದ ಆಟಗಾರರು ದಾಣಿಯುತ್ತಾರೆ.
ಆದರೆ, ಟೀಂ ಇಂಡಿಯಾ ಪರ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ನೀಡಿ ಅವರಿಗೆ ಕೊಂಚ ವಿಶ್ರಾಂತಿ ನೀಡಲು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ. ಏಕೆಂದರೆ ಸೆಮಿಸ್ ಮತ್ತು ಫೈನಲ್ಗಳಂತಹ ಪಂದ್ಯಗಳಲ್ಲಿ ಡಬಲ್ ಉತ್ಸಾಹದೊಂದಿಗೆ ಬುಮ್ರಾ ಲಭ್ಯವಾಗಲು ಅವರಿಗೆ ಸ್ವಲ್ಪ ವಿಶ್ರಾಂತಿ ಅಗತ್ಯವಿದೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ತಂಡದ ಕೀ ಆಟಗಾರರನ ಮೇಲಿನ ಒತ್ತಡ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಯಾವ ರೀತಿಯ ಪ್ಲಾನ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.