- ಅಮೆರಿಕ ವಿರುದ್ಧ ಟೀಂ ಇಂಡಿಯಾಗೆ ಜಯ, ಸೂಪರ್ 8 ಸುತ್ತಿಗೆ ಎಂಟ್ರಿ
- ಅಮೆರಿಕವನ್ನು 7 ವಿಕೆಟ್ಗಳಿಂದ ಮಣಿಸಿದ ಟೀಂ ಇಂಡಿಯಾ
ಐಸಿಸಿ ಟಿ 20 ವಿಶ್ವಕಪ್ 2024 ರ 25 ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಮೆರಿಕ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಸೂಪರ್ 8 ಸುತ್ತಿಗೆ ಲಗ್ಗೆ ಇಟ್ಟಿದೆ. ನಾಸೌ ಕೌಂಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಅತಿಥೇಯ ಅಮೆರಿಕ ವಿರುದ್ಧ ಭಾರತ ತಂಡ ಜಯಗಳಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 20 ಓವರ್ಗಳಲ್ಲಿ ಎಂಟು ವಿಕೆಟ್ಗಳ 110 ರನ್ ಗಳಿಸಿತ್ತು. ಯುಎಸ್ಎ ಯ ಈ ಸವಾಲನ್ನು ಟೀಂ ಇಂಡಿಯಾ 18.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು.
ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಜೋಡಿ ಟೀಂ ಇಂಡಿಯಾ ಗೆಲುವಿಗೆ ಸಾಕ್ಷಿಯಾದರು. ಇವರಿಬ್ಬರ ನಡುವೆ 4 ನೇ ವಿಕೆಟ್ಗಳ 72 ರನ್ಗಳ ಜೊತೆಯಾಟವು ಕಂಡುಬಂತು. ಇನಿಂಗ್ಸ್ ಕೊನೆಯ 24 ಎಸೆತಗಳಲ್ಲಿ 24 ರನ್ಗಳು ಅವಶ್ಯವಿದ್ದವು. ಅಲ್ಲಿಯವರೆಗೂ ಅಮೆರಿಕ ತಂಡವು ಗೆಲುವಿನ ಕನಸು ಕಾಣುತ್ತಿತ್ತು. ಈ ಹಂತದಲ್ಲಿ ಸೂರ್ಯ ಹೊಡೆದ ಒಂದು ಸಿಕ್ಸರ್ ಭಾರತವನ್ನು ಗೆಲುವಿನತ್ತ ಮುನ್ನಡೆಸಿತ್ತು.ಇದೆಲ್ಲದರ ಹೊರತು ಅಲ್ವ ಸವಾಲು ನೀಡಿಯೂ ಗೆಲುವಿಗಾಗಿ ಅಮೆರಿಕ ನೀಡಿದ ಹೋರಾಟ ಶ್ಲಾಘನೀಯವಾಗಿತ್ತು.