ಟಿ20 ವಿಶ್ವಕಪ್ ಆರಂಭವಾಗಿ ಈಗಾಗಲೇ 2 ದಿನಗಳು ಕಳೆದಿವೆ. ಈ ಲೀಗ್ನಲ್ಲಿ ಸೆಮಿಫೈನಲ್ ಆಡಬಹುದಾದ ನಾಲ್ಕು ತಂಡಗಳನ್ನು ಈಗಾಗಲೇ ಹೆಸರಿಸಿದ್ದಾರೆ. ಅದರಂತೆ ಟೀಂ ಇಂಡಿಯಾದ ಯುವ ಬ್ಯಾಟ್ಸ್ಮನ್ ರಿಯಾನ್ ಪರಾಗ್ ಅವರನ್ನು ಸಹ ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಆದರೆ ಈ ಪ್ರಶ್ನೆಗೆ ಪರಾಗ್ ನೀಡಿದ ಉತ್ತರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಅಲ್ಲದೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ರಿಯಾನ್ ಪರಾಗ್ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕೆಂದು ಹಲವರು ಹೇಳಿದ್ದರು. ಆದರೆ ಪರಾಗ್ಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ. ತಮ್ಮ ಅಭ್ಯಾಸದಲ್ಲಿ ನಿರತರಾಗಿರುವ ಪರಾಗ್ ಬಳಿ ಈ ವಿಶ್ವಕಪ್ನಲ್ಲಿ ಸೆಮಿಫೈನಲ್ ಆಡುವ ಅಗ್ರ ನಾಲ್ಕು ತಂಡಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ಬಗ್ಗೆ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ವಿಶ್ವಕಪ್ ನೋಡುವ ಗೋಜಿಗೆ ಹೋಗುವುದಿಲ್ಲ. ಕೊನೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡುತ್ತೇನೆ ಮತ್ತು ಸಂತೋಷಪಡುತ್ತೇನೆ. ನಾನು ವಿಶ್ವಕಪ್ ಆಡುವಾಗ ಅಗ್ರ ನಾಲ್ಕು ತಂಡಗಳ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.