ಐಪಿಎಲ್ ಮುಗಿದ ಮೇಲೆ ಎಲ್ಲೆಡೆ ಕೇಳಿ ಬಂದಿದ್ದ ಸುದ್ದಿ ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆಗಲಿದ್ದಾರೆ. ಈ ವಿಷಯ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಆದ್ರೆ ಇದರ ಬಗ್ಗೆ ಗಂಭೀರ್ ಅಧಿಕೃತವಾಗಿ ಮಾತನಾಡಿರಲಿಲ್ಲ. ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮವೊಂದು ನಡೆದಿತ್ತು. ವಿದ್ಯಾರ್ಥಿಯೊಬ್ಬ ಗೌತಮ್ ಗಂಭೀರ್ಗೆ ಪ್ರಶ್ನೆ ಕೇಳಿದ.
ವಿದ್ಯಾರ್ಥಿ : ಟೀಮ್ ಇಂಡಿಯಾ ಕೋಚ್ ಆಗಲು ಇಷ್ಟ ಪಡುವಿರಾ?
ಗೌತಮ್ : ಹೌದು ನಮ್ಮ ರಾಷ್ಟ್ರೀಯ ತಂಡಕ್ಕೆ ಕೋಚ್ ಆಗುವುದಕ್ಕೆ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಯೆಸ್.. ನಾನು ಭಾರತ ಕ್ರಿಕೆಟ್ ತಂಡದ ಆಟಗಾರರನಾಗಿ ಆಟವಾಡಿದ್ದೇನೆ. ನನಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೀರಿ. ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡುವುದು ನಾನಲ್ಲ. 140 ಕೋಟಿ ಭಾರತೀಯರು ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡುತ್ತಾರೆ. ಪ್ರತಿಯೊಬ್ಬರೂ ನಮಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರೆ ಮತ್ತು ನಾವು ಆಡಲು ಪ್ರಾರಂಭಿಸಿದರೆ, ಭಾರತವು ವಿಶ್ವಕಪ್ ಗೆಲ್ಲುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ನಿರ್ಭಯವಾಗಿರುವುದು ಎಂದು ಹೇಳಿದ್ದಾರೆ.
ಎರಡು ಬಾರಿ ಐಪಿಎಲ್ ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕಪ್ ಗೆಲ್ಲುವಂತೆ ಮಾಡಿರುವ ಗಂಭೀರ್ ಟೀಮ್ ಇಂಡಿಯಾಗೆ ಕೋಚಿಂಗ್ ನೀಡಲು ಇಷ್ಟವಿದೆ ಎಂದು ಹೇಳಿದ್ದಾರೆ. ಆದರೆ ಕೋಚ್ ಆಗಲು ಅರ್ಜಿ ಹಾಕಿದ್ದಾರಾ ಮಾಹಿತಿ ಇಲ್ಲ ಹಾಗೂ ಇದರ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ಕುರಿತು ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ.