ಕೇಂದ್ರ ಚುನಾವಣಾ ಆಯೋಗವು ತಮಿಳು ನಟ ದಳಪತಿ ವಿಜಯ್ ಆರಂಭಿಸಿರುವ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂಗೆ ಮಾನ್ಯತೆ ನೀಡಿದೆ. ನಾವು ಫೆಬ್ರವರಿ 2 ರಂದು ಚುನಾವಣಾ ಆಯೋಗಕ್ಕೆ ನಮ್ಮ ಪಕ್ಷದ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದೆವು. ನಮ್ಮ ಅರ್ಜಿಯನ್ನು ಕಾನೂನುಬದ್ಧವಾಗಿ ಪರಿಶೀಲಿಸಿದ ನಂತರ, ನಮ್ಮ ಭಾರತೀಯ ಚುನಾವಣಾ ಆಯೋಗವು ನಮ್ಮ ತಮಿಳಗ ವೆಟ್ರಿ ಕಳಗಂಗೆ ಮಾನ್ಯತೆ ನೀಡಿದೆ, ಚುನಾವಣೆಯಲ್ಲಿ ಭಾಗವಹಿಸಲು ಅನುಮತಿ ನೀಡಿದೆ ಎಂದು ವಿಜಯ್ ಹೇಳಿದ್ದಾರೆ.
ತಮಿಳು ನಟ ದಳಪತಿ ವಿಜಯ್ ಆರಂಭಿಸಿರುವ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂಗೆ ಕೇಂದ್ರ ಚುನಾವಣಾ ಆಯೋಗವು ಮಾನ್ಯತೆ ನೀಡಿದೆ. “ನಾವು ಫೆಬ್ರವರಿ 2 ರಂದು ಚುನಾವಣಾ ಆಯೋಗಕ್ಕೆ ನಮ್ಮ ಪಕ್ಷದ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದೆವು. ನಮ್ಮ ಅರ್ಜಿಯನ್ನು ಕಾನೂನುಬದ್ಧವಾಗಿ ಪರಿಶೀಲಿಸಿದ ನಂತರ, ನಮ್ಮ ಭಾರತೀಯ ಚುನಾವಣಾ ಆಯೋಗವು ನಮ್ಮ ತಮಿಳಗ ವೆಟ್ರಿ ಕಳಗಂಗೆ ಮಾನ್ಯತೆ ನೀಡಿದೆ, ಚುನಾವಣೆಯಲ್ಲಿ ಭಾಗವಹಿಸಲು ಅನುಮತಿ ನೀಡಿದೆ” ಎಂದು ವಿಜಯ್ ಹೇಳಿದ್ದಾರೆ.
ತಮಿಳುನಾಡು, ಕೇರಳ ಮತ್ತು ಇತರ ದಕ್ಷಿಣ ರಾಜ್ಯಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ದಳಪತಿ ವಿಜಯ್ ಫೆಬ್ರವರಿಯಲ್ಲಿ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಘೋಷಿಸಿದ್ದರು. ಪಕ್ಷವು ಪಾರದರ್ಶಕ, ಜಾತಿ ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ಸಮಾಜದ ಬದಲಾವಣೆಗಾಗಿ ಪಕ್ಷ ಶ್ರಮಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಎರಡು ವಾರಗಳ ಹಿಂದೆ ವಿಜಯ್ ಟಿವಿಕೆ ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು ಅನಾವರಣಗೊಳಿಸಿದ್ದರು. ಧ್ವಜವು ಮೇಲಿನ ಮತ್ತು ಕೆಳಭಾಗದಲ್ಲಿ ಕೆಂಪು ಮತ್ತು ಕೆಂಗೆಂದು ಬಣ್ಣದ್ದಾಗಿದೆ ಮತ್ತು ಮಧ್ಯದಲ್ಲಿ ಹಳದಿ ಬಣ್ಣದಲ್ಲಿದೆ, ಎರಡು ಆನೆಗಳಿವೆ. ಪಕ್ಷದ ಸಿದ್ಧಾಂತವನ್ನು ಶೀಘ್ರದಲ್ಲೇ ಪ್ರಚಾರ ಮಾಡಲು ರಾಜ್ಯ ಮಟ್ಟದ ಸಭೆಯ ನಡೆಯಲಿದೆ, ಚುನಾವಣಾ ಆಯೋಗದ ಮಾನ್ಯತೆ ಹಿನ್ನೆಲೆಯಲ್ಲಿ ವಿವಿಧ ಹಂತಗಳಲ್ಲಿ ಸಭೆ ನಡೆಸಲು ಟಿವಿಕೆ ಸಜ್ಜಾಗುತ್ತಿದೆ. ಮುಂಬರುವ 2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಪಕ್ಷದ ಗುರಿಯಾಗಿದೆ.ಲೋಕಸಭೆ ಚುನಾವಣೆಗೂ ಮುನ್ನವೇ ಟಿವಿಕೆ ಘೋಷಣೆ ಮಾಡಿದ್ದರೂ ಪಕ್ಷ ಚುನಾವಣೆಗೆ ಸ್ಪರ್ಧಿಸಿಲ್ಲ ಅಥವಾ ಯಾರಿಗೂ ಬೆಂಬಲ ಘೋಷಿಸಿಲ್ಲ.