ಬಿಎಸ್ಪಿ ತಮಿಳುನಾಡು ಅಧ್ಯಕ್ಷ ಕೆ ಆರ್ಮ್ಸ್ಟ್ರಾಂಗ್ ಹತ್ಯೆಯಾದ ಬೆನ್ನಲ್ಲೇ ಚೆನ್ನೈ ಪೊಲೀಸ್ ಕಮಿಷನರ್ ಸಂದೀಪ್ ರೈ ರಾಥೋಡ್ರನ್ನು ತಮಿಳುನಾಡು ಪೊಲೀಸ್ ತರಬೇತಿ ಕಾಲೇಜಿಗೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಹಿರಿಯ ಅಧಿಕಾರಿ ಎ. ಅರುಣ್ರನ್ನು ರಾಥೋಡ್ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಅಮುಧಾ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರಿ ಎಸ್. ಡೇವಿಡ್ಸನ್ ದೇವಾಶೀರ್ವಾದಂ ಅವರನ್ನು ನೇಮಿಸಲಾಗಿದೆ.