ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜೊತೆ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ತಪಸ್ವಿನಿ ಪೂಣಚ್ಚ ಅವರು ಎರಡು ಸಿನಿಮಾಗಳನ್ನು ಒಪ್ಪಿಕೊಂಡು ಕನ್ನಡ ಇಂಡಸ್ಟ್ರಿಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ರುಕ್ಮಿಣಿ ವಸಂತ್ ಮತ್ತು ಶ್ರೀ ಜೊತೆಗೆ ಒಂದು ಚಿತ್ರ ಹಾಗೂ ಗುರುನಂದನ್ ಜೊತೆ ಒಂದು ಚಿತ್ರದಲ್ಲಿ ಈ ಬ್ಯೂಟಿ ನಟಿಸುತ್ತಿದ್ದಾರೆ.
‘ನನಗೆ ಬರುವ ಪ್ರತಿಯೊಂದು ಪ್ರಾಜೆಕ್ಟ್ ನಾ ಒಪ್ಪಿಕೊಳ್ಳುವುದಿಲ್ಲ. ನಿರ್ದೇಶಕರೂ ಆಲೋಚನೆಗಳಿಂದಲೇ ಪ್ರತಿಯೊಂದು ಪಾತ್ರಗಳನ್ನು ಬರೆದಿರುತ್ತಾರೆ, ಆದರೆ ನಾನು ಆ ಪಾತ್ರಕ್ಕೆ ಹೇಗೆ ಫಿಟ್ ಆಗುತ್ತೀನಿ ಎಂದು ಯೋಚನೆ ಮಾಡುತ್ತೇನೆ. ನನಗೆ ಕಥೆ ಅಥವಾ ಪಾತ್ರ ಇಷ್ಟವಾಗಿಲ್ಲ ಅಂದ್ರೆ ಒಂದು ನಿಮಿಷವೂ ಯೋಚನೆ ಮಾಡದೆ ಯಾವುದೇ ಮಾನಿಟರಿ ಆ್ಯಂಗಲ್ ಯೋಜಿಸದೆ ತಿರಸ್ಕರಿಸುತ್ತೇನೆ.
ನನ್ನ ಮನಸ್ಸಿಗೆ ತೃಪ್ತಿ ಕೊಡುವ ಪಾತ್ರಗಳನ್ನು ಮಾತ್ರ ಮಾಡಬೇಕು. ರಿಷಬ್ ಸರ್ ಜೊತೆ ನಾನು ಮೊದಲ ಸಿನಿಮಾ ಜರ್ನಿ ಆರಂಭಿಸಿದ್ದು. ನನ್ನ ಸಿನಿ ಜೀವನ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಹಾಗೂ ಜನರು ನನ್ನೊಟ್ಟಿಗೆ ಕನೆಕ್ಟ್ ಆಗಬೇಕು’ ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ತಪಸ್ವಿನಿ ಪೂಣಚ್ಚ ಮಾತನಾಡಿದ್ದಾರೆ.