ಸ್ಯಾಂಡಲ್ವುಡ್ ಸಕ್ಸಸ್ಫುಲ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಬೆಳಕಿನ ಕವಿತೆ ಖ್ಯಾತಿಯ ಚೆಲುವೆ ಸೋನಲ್ ಮೊಂಥೆರೋ ಪ್ರಣಯಪಕ್ಷಿಗಳಾಗಿ ಹಾರಾಡುತ್ತಿದ್ದಾರೆ. ಸ್ಟಾರ್ ಜೋಡಿ ಅದ್ಧೂರಿ ಮದುವೆಯಾದ ಮೇಲೆ ಹನಿಮೂನ್ಗೆ ಹೋಗಿದ್ದಾರೆ. ಹನಿಮೂನ್ನಲ್ಲಿ ಜಾಲಿಯಾಗಿ ಓಡುಡುತ್ತಿರುವ ಈ ಜೋಡಿ ಹಕ್ಕಿಗಳು ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.
ತರುಣ್ ಸುಧೀರ್ ಹಾಗು ಸೋನಲ್ ಮೊಂಥೆರೋ ಕಳೆದ ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್ನಲ್ಲಿ ಮದುವೆ ಸಮಾರಂಭ ನಡೆದಿತ್ತು. ಗುರು ಹಿರಿಯರ ಸಮ್ಮುಖದಲ್ಲಿ ಈ ಸ್ಟಾರ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಈ ಸ್ಟಾರ್ ಜೋಡಿಯ ಮದುವೆ ಸಮಾರಂಭಕ್ಕೆ ಇಡೀ ಸ್ಯಾಂಡಲ್ವುಡ್ ತಾರೆಯರು ಬಂದು ಶುಭ ಹಾರೈಸಿದ್ದರು.
ಮದುವೆಯಾದ ಬಳಿಕ ತರುಣ್ ಸುಧೀರ್ ಹಾಗೂ ಸೋನಲ್ ಹನಿಮೂನ್ ಟ್ರಿಪ್ಗೆ ಹೋಗಿದ್ದಾರೆ. ಸೋನಲ್ ಮೊಂಥೆರೋ ಅವರೇ ತಮ್ಮ ಹನಿಮೂನ್ನ ಅಪ್ಡೇಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಮಾಲ್ಡೀವ್ಸ್ನಲ್ಲಿರುವ ಚಂದನವನದ ಈ ಜೋಡಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ತರುಣ್ ಹಾಗೂ ಸೋನಲ್ ಹನಿಮೂನ್ ವಿಡಿಯೋ ನೋಡಿದ ಅಭಿಮಾನಿಗಳು ಸೂಪರ್ ಜೋಡಿ ಅಂತ ಕಮೆಂಟ್ ಮಾಡುತ್ತಿದ್ದಾರೆ.