ಅಡಿಲೇಡ್ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ . 10 ವಿಕೆಟ್ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ, ಮುಂದಿನ ಪಂದ್ಯದಲ್ಲಿ ಗೆಲ್ಲುವ ತುಡಿತದಲ್ಲಿದ್ದ ಟೀಮ್ ಇಂಡಿಯಾ, ಮೂರೇ ದಿನಕ್ಕೆ ಕೆಟ್ಟ ಸೋಲು ಕಂಡಿದೆ. ಅಷ್ಟೇ ಅಲ್ಲ, 1031 ಎಸೆತಗಳಲ್ಲೇ ಅಂತ್ಯವಾದ ಇಂಡೋ ಆಸಿಸ್ ಶಾರ್ಟ್ ಟೆಸ್ಟ್ ಎಂಬ ಖ್ಯಾತಿಯೂ ಗಳಿಸಿತ್ತು. ಬಾರ್ಡ್ರ್ ಗವಾಸ್ಕರ್ ಸರಣಿಯಲ್ಲಿ ಸ್ಥಾನ ಪಡೆದು, ಟೆಸ್ಟ್ ಕ್ರಿಕೆಟ್ ಜಗತ್ತಿಗೆ ಪದಾರ್ಪಣೆ ಮಾಡಿರುವ ನಿತಿಶ್ ಕುಮಾರ್ ಎರಡನೇ ಟೆಸ್ಟ್ನಲ್ಲೂ ಉತ್ತಮ ಆಟವನ್ನು ಆಡಿದರು. ಅವಕಾಶ ಸಿಕ್ಕಾಗ ದಂಡಿಸುತ್ತಿದ್ದ ನಿತಿಶ್ ಕುಮಾರ್, ಬೌಂಡರಿ ಸಿಕ್ಸರ್ ಸಿಡಿಸುತ್ತಾ ಕಾಂಗರೂಗಳಿಗೆ ಪ್ರತಿಸ್ಪರ್ದಿ ಒಡ್ಡಿದರು.
ಮೊದಲ ಇನ್ನಿಂಗ್ಸ್ನಲ್ಲಿ ನಿತಿಶ್ ಕುಮಾರ್ ರೆಡ್ಡಿ, ಮೂರು ಸಿಕ್ಸರ್, ಮೂರು ಬೌಂಡರಿಯೊಂದಿಗೆ 42 ರನ್ಗಳ ಕಾಣಿಕೆ ನೀಡಿದರು. ಅಲ್ಲದೇ ಒಂದು ವಿಕೆಟ್ ಕೂಡ ತೆಗೆದುಕೊಟ್ಟಿದ್ದರು. ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ 47 ಬಾಲ್ನಲ್ಲಿ 42 ರನ್ಗಳಿಸಿದರು. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ 41 ರನ್ಗಳಿಸಿ ಒಂದು ವಿಕೆಟ್ ಪಡೆದಿದ್ದರೆ, ಎರಡನೇ ಇನ್ನಿಂಗ್ಸ್ನಲ್ಲಿ 38 ರನ್ಗಳ ಕಾಣಿಕೆ ನೀಡಿ, ಒಂದು ವಿಕೆಟ್ ಕಿತ್ತಿದ್ದಾರೆ. ಮೂರೇ ದಿನಕ್ಕೆ ಅಂತ್ಯವಾದ ಈ ಪಿಂಕ್ ಬಾಲ್ ಟೆಸ್ಟ್, ಇಂಡೋ ಆಸಿಸ್ ನಡುವಿನ ಶಾರ್ಟೆಸ್ಟ್ ಟೆಸ್ಟ್ ಮ್ಯಾಚ್ ಎನಿಸಿಕೊಂಡಿದೆ. ಟೀಮ್ ಇಂಡಿಯಾ ಎರಡೂ ಇನ್ನಿಂಗ್ಸ್ಗಳಿಂದ ಸೇರಿ 486 ಎಸೆತ ಬ್ಯಾಟಿಂಗ್ ಮಾಡಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 525 ಎಸೆತ, 2ನೇ ಇನ್ನಿಂಗ್ಸ್ 20 ಎಸೆತಗಳೂ ಸೇರಿ ಒಟ್ಟಾರೆ 545 ಎಸೆತ ಬ್ಯಾಟಿಂಗ್ ಮಾಡಿದೆ. ಇದರೊಂದಿಗೆ 1031 ಎಸೆತಗಳಿಗೆ ಅಂತ್ಯವಾದ ಪಂದ್ಯ ಎಂಬ ಹೆಗ್ಗಳಿಕೆಗೆ ಪಡೆದಿದೆ.