ಖಾಸಗಿ ಕಂಪನಿಗಳಿಗೆ ಸದ್ಯ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಭಾರೀ ಪೈಪೋಟಿ ನೀಡುತ್ತಿದೆ. ಬೆಲೆ ಏರಿಕೆ ಬಿಸಿಯಿಂದ ಅನೇಕರು ಬಿಎಸ್ಎನ್ಎಲ್ನತ್ತ ಮುಖ ಮಾಡಿದ್ದು, ಕಡಿಮೆ ಬೆಲೆಯ ಕೆಲವು ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಅದರಂತೆಯೇ ಇದೀಗ ಬಿಎಸ್ಎನ್ಎಲ್ನ 147 ರೂಪಾಯಿಯ ಪ್ರಿಪೇಯ್ಡ್ ಯೋಜನೆ ಜನಪ್ರಿಯತೆಯಲ್ಲಿದೆ.
ಬಹುತೇಕರು 200 ರೂಪಾಯಿಗಿಂತ ಕಡಿಮೆ ಬೆಲೆಯ ಯೋಜನೆಯ ಮೊರೆ ಹೋಗುತ್ತಿದ್ದಾರೆ. ಅದರಂತೆಯೇ ಬಿಎಸ್ಎನ್ಎಲ್ ಪ್ರಿಪೇಯ್ಡ್ ಗ್ರಾಹಕರು ಸಹ ಕಡಿಮೆ ಬೆಲೆಯ ಪ್ಲಾನ್ ಮೊರೆ ಹೋಗುತ್ತಿದ್ದು, ಈ ವೇಳೆ 147 ರೂಪಾಯಿಯ ಯೋಜನೆ ಎಲ್ಲರ ಕಣ್ಣಿಗೆ ಬಿದ್ದಿದೆ. ಸದ್ಯ ಗ್ರಾಹಕರು ಈ ಯೋಜನೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. 147 ರೂಪಾಯಿಯ ಯೋಜನೆ ಮೂಲಕ ಒಂದು ತಿಂಗಳು ಉಚಿತ ಕರೆಯನ್ನು ಆನಂದಿಸಬಹುದಾಗಿದೆ. ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು ಇಂಥಾ ಪ್ಲಾನ್ ಪರಿಚಯಿಸದ ಕಾರಣ ಬಿಎಸ್ಎನ್ಎಲ್ನ ಈ ಪ್ಲಾನ್ ಜನರ ಮನಗೆದ್ದಿದೆ.
ಅಂದಹಾಗೆಯೇ 147 ರೂಪಾಯಿಯ ಪ್ಲಾನ್ ದಿನಕ್ಕೆ 4.90 ರೂಪಾಯಿ ವೆಚ್ಚದಂತೆ ಇದರಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಆನಂದಿಸಬಹುದಾಗಿದೆ. ಮಾತ್ರವಲ್ಲದೆ 100 ಎಸ್ಎಮ್ಎಸ್ ಉಚಿತವಾಗಿದೆ.
ಹೆಚ್ಚುವರಿಯಾಗಿ ತಿಂಗಳಿಗೆ 10ಜಿಬಿ ಡೇಟಾವನ್ನು ನೀಡುತ್ತಿದೆ. ಜೊತೆಗೆ ಬಿಎಸ್ಎನ್ಎಲ್ ಟ್ಯೂನ್ ಒಳಗೊಂಡಿದೆ. ಬಳಕೆದಾರರು ತಮ್ಮ ಕಾಲರ್ ಟ್ಯೂನನ್ನು ಹೆಚ್ಚುವರಿ ವೆಚ್ಚವಿಲ್ಲದೆ ಆನಂದಿಸಬಹುದಾಗಿದೆ. 147 ರೂಪಾಯಿಯ ಯೋಜನೆಯು ಒಂದು ತಿಂಗಳ ಸಿಂಧುತ್ವ ಹೊಂದಿದೆ.