ಜಾಗತಿಕ ಟೆಕ್ ಜಗತ್ತಿನಲ್ಲಿ ಭಾರತೀಯರು ಮಿಂಚಿನ ವೇಗದಲ್ಲಿ ಹೆಜ್ಜೆ ಇರಿಸುತ್ತಿದ್ದಾರೆ. ಸಾಫ್ಟ್ವೇರ್ ಡೆವಲಪರ್ಗಳ ಅಡ್ಡೆಯಾದ ಗಿಟ್ಹಬ್ ಪ್ಲಾಟ್ಫಾರ್ಮ್ನಲ್ಲಿ ಭಾರತೀಯರ ಸಂಖ್ಯೆ ಅದ್ವಿತೀಯವಾಗಿ ಹೆಚ್ಚುತ್ತಿದೆ. ಗಿಟ್ಹಬ್ ಸಿಇಒ ಥಾಮಸ್ ಡೋಹಮ್ಕೆ ಅವರ ಪ್ರಕಾರ ಭಾರತೀಯ ಡೆವಲಪರ್ಗಳ ಸಂಖ್ಯೆ ಅತಿವೇಗವಾಗಿ ಹೆಚ್ಚುತ್ತಿದೆಯಂತೆ. ಜಾಗತಿಕ ಟೆಕ್ ದೈತ್ಯನಾಗಿ ಭಾರತ ನಿಲ್ಲುವುದನ್ನು ಯಾರೂ ತಡೆಯಲು ಆಗಲ್ಲ ಎಂದಿದ್ದಾರೆ ಥಾಮಸ್.
ಗಿಟ್ಹಬ್ನಲ್ಲಿ ಭಾರತೀಯ ಡೆವಲಪರ್ಗಳ ಪ್ರಾಜೆಕ್ಟ್ ಕೊಡುಗೆ 520 ಕೋಟಿ. 2024ರಲ್ಲಿ 10.8 ಕೋಟಿ ಹೊಸ ರೆಪಾಸಿಟರಿಗಳ ಸ್ಥಾಪನೆಯಾಗಿವೆ ಎನ್ನುವ ಮಾಹಿತಿಯನ್ನು ಹಂಚಿಕೊಂಡ ಗಿಟ್ಹಬ್ ಸಿಇಒ ಥಾಮಸ್ ಅವರು, ಭಾರತದ ಬಗ್ಗೆ ಅಭಿಮಾನ ತೋರ್ಪಡಿಸಿದ್ದಾರೆ.
‘ಭಾರತದ ಡೆವಲಪರ್ಗಳು ಬಹಳ ಮುಂದೋಗಿದ್ದಾರೆ. ಎಐ ಅನ್ನು ನಿರ್ಮಿಸಲು ಎಐ ಅನ್ನು ಹೆಚ್ಚೆಚ್ಚು ಬಳಸುತ್ತಿದ್ದಾರೆ. ಪಬ್ಲಿಕ್ ಜನರೇಟಿವ್ ಎಐ ಪ್ರಾಜೆಕ್ಟ್ಗಳಲ್ಲಿ ಅತಿಹೆಚ್ಚು ಕೊಡುಗೆಗಾರರಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮುಂದಿನ ಶ್ರೇಷ್ಠ ಎಐ ಬಹುರಾಷ್ಟ್ರೀಯವು ಏಷ್ಯಾ ಖಂಡದಿಂದ ಹೊರಹೊಮ್ಮುವ ಸಾಧ್ಯತೆ ಹೆಚ್ಚಿದೆ,’ ಎಂದು ಥಾಮಸ್ ಡೋಹಮ್ಕೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
2024ರ ವರ್ಷದಲ್ಲಿ ಗಿಟ್ಹಬ್ ಪ್ಲಾಟ್ಫಾರ್ಮ್ನಲ್ಲಿ ಜನರೇಟಿವ್ ಎಐ ಪ್ರಾಜೆಕ್ಟ್ಗಳಿಗೆ ವಿವಿಧ ದೇಶಗಳ ಕಾಂಟ್ರಿಬ್ಯೂಟರ್ಗಳ ಕೊಡುಗೆ ಎಷ್ಟಿದೆ ಎನ್ನುವ ಪಟ್ಟಿ ಇಲ್ಲಿದೆ.
- ಅಮೆರಿಕ
- ಭಾರತ
- ಹಾಂಕಾಂಗ್
- ಚೀನಾ
- ಜರ್ಮನಿ
- ಜಪಾನ್
- ಯುಕೆ
- ಸಿಂಗಾಪುರ್
- ಕೆನಡಾ
- ಫ್ರಾನ್ಸ್
ಇಲ್ಲಿ ಅಮೆರಿಕನ್ ಕಾಂಟ್ರಿಬ್ಯೂಟರ್ಗಳ ಸಂಖ್ಯೆ 70-80 ಸಾವಿರದಷ್ಟಿದೆ. ಭಾರತೀಯ ಕಾಂಟ್ರಿಬ್ಯೂಟರ್ಗಳ ಸಂಖ್ಯೆ 25,000 ಸಮೀಪ ಇದೆ. ಮೂರನೇ ಸ್ಥಾನದಲ್ಲಿರುವ ಹಾಂಕಾಂಗ್ನ ಸಂಖ್ಯೆ 21,000 ದಷ್ಟಿರಬಹುದು.