ತೆಲಂಗಾಣ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ತೆಲಂಗಾಣ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ ಅವರು ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ಯಲ್ಲಿ ಭಾನುವಾರ ವಿದ್ಯಾರ್ಥಿಗಳೊಂದಿಗೆ ಫುಟ್ಬಾಲ್ ಆಡಿದರು. ರೇವಂತ್ ರೆಡ್ಡಿ ಫುಟ್ ಬಾಲ್ ಪ್ರೇಮಿಯಾಗಿದ್ದು, 9ನೇ ಸಂಖ್ಯೆಯ ಇಂಡಿಯಾ ಜೆರ್ಸಿಯನ್ನು ಧರಿಸಿರುವುದನ್ನು ಕಾಣಬಹುದು.
ನಿನ್ನೆಯವರೆಗೂ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಕಾಂಗ್ರೆಸ್ ಅಧ್ಯಕ್ಷರು ವಿದ್ಯಾರ್ಥಿಗಳೊಂದಿಗೆ ಸೌಹಾರ್ದ ಫುಟ್ಬಾಲ್ ಪಂದ್ಯವನನು ನಡೆಸಿ ನವ ಚೈತನ್ಯ ತುಂಬಿ ವಿಶ್ರಾಂತಿ ಪಡೆದಿದ್ದಾರೆ. ತೆಲಂಗಾಣದಲ್ಲಿ ಮೇ 13 ಎಂದು ಚುನಾವಣೆ ನಡೆಯಲಿದೆ.