ಒಂದನೇ ತರಗತಿ ಓದುತ್ತಿರುವ ಮಗುವಿನ ಮೇಲೆ ಡ್ಯಾನ್ಸ್ ಮಾಸ್ಟರ್ ಲೌಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ತೆಲಂಗಾಣದ ಮೇಡ್ಚಲ್ ಮಲ್ಕಾಜ್ಗಿರಿ ಜಿಲ್ಲೆಯ ಮೆಡಿಪಲ್ಲಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಮೆಡಿಪಲ್ಲಿಯ ಖಾಸಗಿ ಶಾಲೆಗೆ ಬರುತ್ತಿದ್ದ 1ನೇ ತರಗತಿ ಮಗುವಿನ ಮೇಲೆ ಡ್ಯಾನ್ಸ್ ಮಾಸ್ಟರ್ ರವಿ ಅನುಚಿತವಾಗಿ ವರ್ತಿಸುತ್ತಿದ್ದನು ಎಂಬುದು ಬೆಳಕಿಗೆ ಬಂದಿದೆ. ಡ್ಯಾನ್ಸ್ ಹೇಳಿ ಕೊಡುವ ನೆಪದಲ್ಲಿ ಮಗುವನ್ನ ಮುಟ್ಟುತ್ತಿದ್ದನು ಎನ್ನಲಾಗಿದೆ. ಈ ವಿಷಯ ಮಗುವಿನ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಪೋಷಕರು ಶಾಲೆಗೆ ಬಂದು ಡ್ಯಾನ್ಸ್ ಮಾಸ್ಟರ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೆಲಕ್ಕೆ ಬಿದ್ದರು ಮಹಿಳೆಯೊಬ್ಬರು ಕೆನ್ನೆ, ಕೆನ್ನೆಗೆ ಬಾರಿಸಿ ಬೈದಿದ್ದಾರೆ. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.