ಆಸ್ತಿಗಾಗಿ ಅಣ್ಣ- ತಮ್ಮ, ಅಪ್ಪ- ಮಕ್ಕಳ ಮಧ್ಯೆ ಜಗಳ ಇದ್ದೇ ಇರುತ್ತದೆ. ಆದ್ರೆ ಇಲ್ಲೊಂದು ಪ್ರಕರಣ ಉಲ್ಟಾವಾಗಿದೆ. ಪತಿ ಪತ್ನಿಗೆ ಕಾಟ ಕೊಡುವುದು, ಚಿತ್ರಹಿಂಸೆ ನೀಡುವುದು ನೋಡಿರುತ್ತಿರಾ.. ಆದ್ರೆ ಇಲ್ಲಿ ಆಸ್ತಿಗಾಗಿ ಪತ್ನಿಯೇ ತನ್ನ ಪತಿಗೆ ಸರಪಳಿಯಿಂದ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಈ ಮಹಿಳೆ ತನ್ನ ಗಂಡನನ್ನು ಆಸ್ತಿ ವಿಚಾರವಾಗಿ ಸರಪಳಿಯಲ್ಲಿ ಕಟ್ಟಿ ತೀವ್ರವಾಗಿ ಚಿತ್ರಹಿಂಸೆ ನೀಡಿದ್ದಾಳೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.