ಬಿಗ್ ಬಾಸ್ ತೆಲುಗು ಸೀಸನ್ 8 ರ ವಿಜೇತ ನಿಖಿಲ್ ಮಳಿಯಕ್ಕಲ್ ಅವರು ಒಬ್ಬ ಕನ್ನಡಿಗ ಹಾಗೂ ಮೈಸೂರಿನವ ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಆದರೆ, ಕನ್ನಡಿಗನಿಗೆ ತೆಲುಗಿನ ಗೆಲುವಿನ ಟ್ರೋಫಿ ಕೊಟ್ಟಿರುವುದು ಕೆಲ ಸ್ಥಳೀಯರಿಗೆ ಸಹಿಸಲಾಗದೇ ತಮ್ಮ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದನ್ನ ಕಂಡು ನಿಖಿಲ್ ಭಾರೀ ಕೋಪಗೊಂಡಿದ್ದು, ನಾನು ಮೂಲತಃ ಕನ್ನಡಿಗನಾಗಿರಬಹುದು. ಆದರೆ ನನಗೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಯಾವುದೇ ಬೇಧವಿಲ್ಲ. ಎಂದು ಜನರಿಗೆ ಉತ್ತರ ನೀಡಿದ್ದಾರೆ. ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತಿದ್ದು, ಅದು ಯಾರು ಎಂದು ನನಗೆ ತಿಳಿದಿದೆ , ಇದನ್ನೆಲ್ಲಾ ನಿಲ್ಲಿಸದಿದ್ದರೆ ಚೆನ್ನಾಗಿರುವುದಿಲ್ಲ. ಎಂದು ಲೈವ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಫಿನಾಲೆ ಟಿಕೇಟ್ ಗೆದ್ದಿದ್ದರಿಂದ ಅವಿನಾಶ್ ನೇರವಾಗಿ ಫೈನಲ್ಗೆ ಪ್ರವೇಶ ಪಡೆದಿದ್ದರು. ಕಳೆದ ನಾಲ್ಕು ವಾರಗಳಿಂದ ಟೈಟಲ್ ಪೈಪೋಟಿ ನಿಖಿಲ್ ಮತ್ತು ಗೌತಮ್ ನಡುವೆ ಎಂಬ ಪ್ರಚಾರ ನಡೆಯುತ್ತಿತ್ತು. ಹೀಗಾಗಿ ಫೈನಲಿಸ್ಟ್ ಪಟ್ಟಿಯಲ್ಲಿದ್ದ ಉಳಿದ ಕಂಟೆಸ್ಟೆಂಟ್ಸ್ ಅವಿನಾಶ್, ಪ್ರೇರಣಾ ಮತ್ತು ನಬೀಲ್ ಹೊರಬೀಳುತ್ತಾರೆ ಎಂದು ಪ್ರೇಕ್ಷಕರು ಊಹಿಸಿದ್ದರು. ಶೋ ನಿರೂಪಕ ನಾಗಾರ್ಜುನ ಅವರು ದೊಡ್ಡ ಸೂಟ್ಕೇಸ್ ಕೂಡ ಆಫರ್ ಮಾಡಿದ್ದರು. ಇಬ್ಬರಲ್ಲಿ ಒಬ್ಬರೇ ಗೆಲ್ಲುವುದರಿಂದ ಈ ಹಣ ತೆಗೆದುಕೊಂಡು ಒಬ್ಬರು ಟೈಟಲ್ ರೇಸ್ನಿಂದ ಹಿಂದೆ ಸರಿಯಬಹುದು ಎಂದು ಸೂಚಿಸಿದ್ದರು. ಆದರೆ, ನಿಖಿಲ್ ಮತ್ತು ಗೌತಮ್ ಇಬ್ಬರೂ ಇದಕ್ಕೆ ನಿರಾಕರಿಸಿದರು. ಕೊನೆಗೆ ನಿಖಿಲ್ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದರು. ಈಗ ಕೆಲ ಸ್ಥಳೀಯರು ಹೀಗೆ ವಿರೋಧ ವ್ಯಕ್ತ ಪಡಿಸುತ್ತಿರುವುದು ಬಿಗ್ ಬಾಸ್ ವೀಕ್ಷಕರಿಗೆಲ್ಲರಿಗೂ ಶಾಕ್ ತರಿಸಿದೆ.