ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ ದಂಪತಿಗೆ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಗವಿಸಿದ್ದೇಶ್ವರ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ಸೂಚಿಸಿದ್ದಾರೆ. ಗದಗದ ದಂಪತಿಗಳು ವಿಚ್ಛೇದನಕ್ಕಾಗಿ 4 ವರ್ಷದ ಹಿಂದೆ ಧಾರಾವಾಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸೆ.17ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಕೃಷ್ಣ ದೀಕ್ಷಿತ ಗಂಡ ಹೆಂಡತಿ ಎಂದರೆ ಸಮಸ್ಯೆ ಇದ್ದದ್ದೇ. ಬೇರೆಯಾಗುವುದು ಸರಿಯಲ್ಲ ಮಾನಸಿಕ ಸಮಸ್ಯೆಯಿದ್ದರೆ ಮನೋವೈದ್ಯರ ಬಳಿ ಹೋಗಿ ಎಂದಿದ್ದಾರೆ. ದಂಪತಿ ಈಗಾಗಲೇ ವೈದ್ಯರ ಬಳಿಯೂ ಹೋಗಿದ್ದೇವೆ ಎಂದಿದ್ದಾರೆ. ಹಾಗಾದರೆ ಮಠಾಧೀಶರ ಬಳಿ ಹೋಗಿ ಎಂದಾಗ ಗಂಡ, ಗದುಗಿನ ತೋಂಟದಾರ್ಯ ಮಠದ ಸ್ವಾಮೀಜಿ, ಪತ್ನಿ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಹೋಗುತ್ತೇವೆ ಎಂದಿದ್ದಾರೆ. ಆಗ ನ್ಯಾಯಮೂರ್ತಿ ಅವರು, ಗವಿಸಿದ್ಧೇಶ್ವರ ಸ್ವಾಮೀಜಿ ಬಳಿ ಹೋಗಲು ಹೇಳಿದ್ದು, ಗಂಡ-ಹೆಂಡತಿ ಸೆ.22ರಂದು ಕೊಪ್ಪಳ ಗವಿಸಿದ್ಧೇಶ್ವರ ಮಠಕ್ಕೆ ಹೋಗಲಿದ್ದಾರೆ.