ಅಜೆಕಾರಿನ ಇನ್ಸ್ಟಾಗ್ರಾಂ ರೀಲ್ಸ್ ರಾಣಿ ಪ್ರತಿಮಾಳಿಂದ ಪತಿಗೆ ಸ್ಲೋ ಪಾಯ್ಸನ್ ನೀಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಉಡುಪಿಯ ರಾಮನ್ಸ್ ಲ್ಯಾಬ್ ಅನ್ನು ತಾತ್ಕಾಲಿಕ ಬಂದ್ ಮಾಡಲಾಗಿದ್ದು, ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ತಮಿಳು ಸ್ಟಾರ್ ವಿಜಯ್ ಭರ್ಜರಿ ರಾಜಕೀಯ ಎಂಟ್ರಿ..!
ಹೋಟೆಲ್ ನಡೆಸುತ್ತಿದ್ದ ಅಜೆಕಾರು ದೆಪ್ಪುತ್ತೆಯ ಬಾಲಕೃಷ್ಣ ಅವರಿಗೆ ಆಹಾರದಲ್ಲಿ ಪತ್ನಿ ಸ್ಟೋಪಾಯ್ಸನ್ ನೀಡಿದ್ದಲ್ಲದೆ, ನಂತರ ಪ್ರಿಯಕರನ ಜತೆಗೆ ಸೇರಿ ಹತ್ಯೆ ಮಾಡಿದ್ದಳು. ಪ್ರತಿಮಾಗೆ ವಿಷವಸ್ತುವನ್ನು ಪ್ರಿಯಕರ ದಿಲೀಪ್ ಹೆಗ್ಡೆ ಉಡುಪಿಯ ಒಳಕಾಡು ರಾಮನ್ ಲ್ಯಾಬ್ನಿಂದ ಪಡೆದಿದ್ದ. ಈ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸರು ರಾಮನ್ಸ್ ಲ್ಯಾಬ್ ಮಾಲೀಕನನ್ನು ಹಾಗೂ ಆತನ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಮಾ ನೀಡಿದ್ದ ವಿಷವಸ್ತುವನ್ನು ಹೆಚ್ಚಾಗಿ ಶಾಲಾ ಕಾಲೇಜುಗಳ ಲ್ಯಾಬ್ಗಳಲ್ಲಿ ಬಳಸಲಾಗುತ್ತದೆ. ಇದು ಬಿಳಿ ಅಥವಾ ಹಳದಿ ಬಣ್ಣದ ಪುಡಿಯಾಗಿದ್ದು, ವಾಸನೆಯಿಲ್ಲ. ಇದರ ಸೇವನೆಯಿಂದ ದೌರ್ಬಲ್ಯ, ರಕ್ತಹೀನತೆ, ಶ್ರಂಬೋಸೈಟೋಪೆನಿಯಾ (ಕಡಿಮೆ ಪ್ಲೇಟೈಟ್ ಎಣಿಕೆ), ಲ್ಯುಕೋಪೆನಿಯಾ (ಕಡಿಮೆ ಬಿಳಿ ರಕ್ತ ಕಣಗಳ ಸಂಖ್ಯೆ), ರಕ್ತಹೀನತೆ (ಮೂಳೆ ಮಜ್ಜೆಯ ವೈಫಲ್ಯ), ರಕ್ತ ಕಟ್ಟಿ ಹೃದಯ ಸ್ತಂಭನ, ಉಸಿರಾಟದ ವೈಫಲ್ಯ, ರೋಗಗ್ರಸ್ತ ವಾಗುವಿಕೆ, ನರವೈಜ್ಞಾನಿಕ ಹಾನಿ, ಹೆಪಟೊಟಾಕ್ಸಿಸಿಟಿ (ಯಕೃತ್ತಿನ ಹಾನಿ), ಮೂತ್ರಪಿಂಡಕ್ಕೆ ಹಾನಿ, ಸೆಕೆಂಡರಿ ಕ್ಯಾನ್ಸರ್ಗಳು ಕಾಡುತ್ತವೆ. ಪ್ರತಿಮಾ ನಿತ್ಯ ಆಹಾರದ ಜೊತೆ ಪತಿ ಬಾಲ ಕೃಷ್ಣಗೆ ಈ ರಾಸಾಯನಿಕ ಕರಗಿಸಿ ನೀಡುತ್ತಿದ್ದಳು. ಇದರಿಂದಾಗಿ ಬಾಲಕೃಷ್ಣ ಅಂಗಾಗಗಳ ಸಂವೇದನೆ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅ.20ರ ರಾತ್ರಿ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ, ಬಾಲಕೃಷ್ಣ ಅವರನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು.