ತಪ್ಪನ್ನು ಯಾರೇ ಮಾಡಿರಲಿ, ಕಾನೂನಿನ ಮುಂದೆ ತಲೆ ಬಾಗಲೇ ಬೇಕು ಎಂಬ ನಿಯಮವೇನೋ ಸರಿ. ಮನುಷ್ಯತ್ವ ಇರುವ ಕೆಲ ಮಾನವರೇ ಈ ನಿಯಮಾವಳಿಗಳನ್ನು ಅರ್ಥ ಮಾಡಿಕೊಳ್ಳದೇ ದೊಡ್ಡ ದೊಡ್ಡ ಅಪರಾಧಗಳನ್ನು ಮಾಡುತ್ತಾರೆ. ಆದರೆ, ಥೈಲ್ಯಾಂಡ್ ನ ಸರ್ಕಾರ ಒಂದು ಮುಗ್ಧ ಜೀವಿಯು ಅರಿಯದೇ ಮಾಡಿದ ತಪ್ಪಿಗೆ ಅದನ್ನು ಬಂಧಿಸಿದ್ದಾರೆ. ಆ ಮುಗ್ಧ ಜೀವಿ ಯಾವುದು ಗೊತ್ತ? ಒಂದು ಬೆಕ್ಕು. ಅಷ್ಟಕ್ಕೂ ಬೆಕ್ಕು ಮಾಡಿದ್ದಾದರೂ ಏನು? ಇಲ್ಲಿದೆ ನೋಡಿ.
ಬೆಕ್ಕು ಮೀನನ್ನು ಕದ್ದು ತಿಂದಿದ್ದಕ್ಕೆ ಥೈಲ್ಯಾಂಡ್ ಪೋಲೀಸರು ಆ ಬೆಕ್ಕನ್ನೇ ಬಂಧಿಸಿದ್ದಾರೆ. ಮಾರ್ಕೇಟ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಗೆ ಮೀನನ್ನು ಖರೀಧಿಸಿದ್ದ. ರಸ್ತೆ ಪಕ್ಕದಲ್ಲೇ ಬೈಕ್ ನಿಲ್ಲಿಸಿ ಮೀನನ್ನು ಕವರ್ ನಲ್ಲಿ ನೇತು ಹಾಕಿ ತೆರಳಿದ್ದ. ಅಲ್ಲೇ ಎಲ್ಲೋ ಪಕ್ಕದಲ್ಲಿ ಇದ್ದ ಬೆಕ್ಕಿಗೆ ಈ ಮೀನಿನ ವಾಸನೆ ತಟ್ಟದೇ ಇರಲು ಸಾಧ್ಯವೇ? ಬೆಕ್ಕು ಮೀನನ್ನು ತಿಂದು ಮುಗಿಸಿದೆ. ಇದನ್ನ ಕಂಡ ಆ ವ್ಯಕ್ತಿ ಬೆಕ್ಕು ಮೀನನ್ನು ಕದ್ದು ಒಡಿ ಹೋಗುವುದನ್ನು ವಿಡಿಯೋ ಮಾಡಿದ್ದಾನೆ. ಅದನ್ನೇ ಸಾಕ್ಷಿಯಾಗಿಟ್ಟುಕೊಂಡು ಪೋಲೀಸ್ ಠಾಣೆಯಲ್ಲಿ ಬೆಕ್ಕಿನ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಆ ವ್ಯಕ್ತಿಯ ನಿರ್ಧಾರ ಹಾಗೂ ಪೋಲೀಸರ ಕಾರ್ಯ ಎಲ್ಲರನ್ನು ನಗುವಂತೆ ಮಾಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾ ಫುಲ್ ವೈರಲ್ ಆಗಿದೆ.