ಐಸ್ಲ್ಯಾಂಡ್ ದೇಶದಲ್ಲಿ ಟಿಕ್ಟಾಕ್ ಸ್ಟಾರ್ ಲಾಗನ್ ಮೊಫಿಟ್ ಸೋಯಾ ಸಾಸ್, ಎಳ್ಳೆಣ್ಣೆ ಮತ್ತು ಸೌತೆಕಾಯಿ ಬಳಸಿ ಏಷ್ಯಾದ ಸ್ವಾದ ಹೊಂದಿರುವ ಸಲಾಡ್ ತಯಾರಿಕೆ ವಿಡಿಯೋವನ್ನು ಹಂಚಿಕೊಂಡಿದ್ದರು. ಇದರಿಂದ ಪ್ರಭಾವಿತರಾದ ಅಲ್ಲಿನ ಜನ ತಮ್ಮ ಮನೆಗಳಲ್ಲೂ ಈ ಪ್ರಯೋಗ ಮಾಡಿ ನೋಡಲು ಸೌತೆಕಾಯಿ ಖರೀದಿಗೆ ಮುಗಿಬಿದ್ದಿದ್ದಾರೆ.
ಇದರಿಂದಾಗಿ ಅಲ್ಲಿನ ಮಾರುಕಟ್ಟೆಗಳಲ್ಲಿ ಸೌತೆಕಾಯಿಯ ಕೊರತೆ ಉಂಟಾಗಿದೆ. ಒಂದು ಕಡೆ ಸೌತೆಕಾಯಿ ಮಾರಾಟಗಾರರ ಅಂಗಡಿಗಳು ಜನರನ್ನು ಸೆಳೆಯುತ್ತಿದ್ದರೆ, ಇತ್ತ ಬೇರೆ ತರಕಾರಿಗಳತ್ತ ತಿರುಗಿ ನೋಡುವವರೇ ಇಲ್ಲವಾಗಿದ್ದಾರೆ.