ಕರ್ನಾಟಕದ ಬ್ರಾಂಡ್ ಕೆಎಂಎಫ್ ನ ಉತ್ಪನ್ನಗಳು ಭಾರತದಾದ್ಯಂತ ವಿವಿಧೆಡೆ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಹೆಮ್ಮೆಯ ವಿಷಯ. ಅದರಲ್ಲಿಯೂ ತಿರುಪತಿ ಲಡ್ಡುಗೆ ಕರ್ನಾಟಕದ ತುಪ್ಪ ಹೋಗಿ ಸೇರುತ್ತಿರುವುದು ಇಂದಿನ ಮಾತಲ್ಲ. ಈಗ ತಿರುಪತಿಗೆ ಬರುವ ಭಕ್ತಾದಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದಂತೆ ಲಡ್ಡುಗಳ ಮೇಲಿನ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ (ತಿರುಮಲ ತಿರುಪತಿ ದೇವಸ್ಥಾನ) TTD ಇನ್ನು ಹೆಚ್ಚುವರಿ 84 ನೌಕರರನ್ನು ನೇಮಿಸಿಕೊಳ್ಳುವ ಮೂಲಕ ಆಡಳಿತ ಮಂಡಳಿ ಯೋಜನೆ ಮಾಡಿದೆ.
ಪ್ರತಿದಿನ ತಯಾರಾಗುತಿದ್ದ ಲಡ್ಡುಗಳ ಸಂಖ್ಯೆ
3.5 ಲಕ್ಷ ಸಣ್ಣ ಲಡ್ಡುಗಳು
6,000 ದೊಡ್ಡ ಲಡ್ಡುಗಳು
3,500 ವಡೆಗಳು
ಇನ್ನು ಮುಂದೆ ತಯಾರಾಗುವ ಹೆಚ್ಚುವರಿ ಲಡ್ಡುಗಳ ಸಂಖ್ಯೆ
50,000 ಸಣ್ಣ ಲಡ್ಡುಗಳು
4,000 ದೊಡ್ಡ ಲಡ್ಡುಗಳು
3,500 ಹೆಚ್ಚುವರಿ ವಡೆಗಳು
ಇದಕ್ಕಾಗಿ 74 ವೈಷ್ಣವರು ಹಾಗೂ 10 ವೈಷ್ಣವರಲ್ಲದವರನ್ನು ಲಡ್ಡು ತಯಾರಿಸುವ ಸ್ಥಳವಾದ ಪೊಟ್ಟುವಿನಲ್ಲಿ ಕೆಲಸ ಮಾಡಲು ನೇಮಿಸಿಕೊಳ್ಳಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ. ಹೆಚ್ಚುವರಿ 84 ನೌಕರರನ್ನು ನೇಮಿಸಿಕೊಳ್ಳುವ ಮೂಲಕ ಆಡಳಿತ ಮಂಡಳಿ ಇದನ್ನ ನಡೆಸಲಿದೆ.