ಕನ್ನಡ ಸೀರಿಯಲ್ ಹಿಸ್ಟರಿಯಲ್ಲಿ ತಮ್ಮದೇ ವಿಭಿನ್ನ ಸೀರಿಯಲ್ಗಳ ಮೂಲಕ ಮನೆಮಾತಾದ, ಸೀರಿಯಲ್ಗಳ ದಿಗ್ಗಜರಲ್ಲಿ ಟಾಪ್ ನಲ್ಲಿರೋ ನಟ, ನಿರ್ದೇಶಕ ಟಿ.ಎನ್ ಸೀತಾರಾಮ್ ತಮ್ಮ ಫೈರ್ ಬ್ರಾಂಡ್ ಪಾತ್ರ ಅಡ್ವೋಕೇಟ್ ಸಿಎಸ್ಪಿ, ಚಂದ್ರಶೇಖರ್ ಪ್ರಸಾದ್ ರೂಪದಲ್ಲಿ ಹೊಸ ಸೀರಿಯಲ್ ಮೂಲಕ ಮರುಳುತ್ತಿದ್ದಾರೆ.
ಟಿ ಎನ್ ಸೀತಾರಾಮ್ ನಿರ್ದೇಶನದ ಸೀರಿಯಲ್ಗಳು ಮುಗಿದು ಎಷ್ಟೋ ದಿನಗಳಾಗಿದ್ರು, ಜನ ಇವತ್ತಿಗೂ ಆ ಸೀರಿಯಲ್ಗಳನ್ನ ಮರೆತಿಲ್ಲ, ಆ ಸೀರಿಯಲ್ಗಳಲ್ಲಿ ಇರುತ್ತಿದ್ದ ಕೋರ್ಟ್ ಸೀನ್ಗಳನ್ನ ಮರೆತಿಲ್ಲ, ಕೋರ್ಟ್ ಸೀನ್ಗಳಲ್ಲಿ ಇರುತ್ತಿದ್ದ ಸಿಎಸ್ಪಿ ವಾದ ಮರೆತಿಲ್ಲ. ಈಗ ಮತ್ತೆ ಸಿಎಸ್ಪಿ ಮರುಳುತ್ತಿದ್ದಾರೆ. ಹೊಸ ಸೀರಿಯಲ್ನ ಮೂಲಕ ಟಿಎನ್ ಸೀತಾರಾಮ್ ನಿರ್ದೇಶನದ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆರಂಭಿಸಲಿದೆ.
ಟಿಎನ್ ಸೀತಾರಾಮ್ ನಿರ್ದೇಶನದ ಹೊಸ ಸೀರಿಯಲ್, ಸೀರಿಯಲ್ನ ಟೈಟಲ್ ಅನ್ನು ಈ ವಾರದ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ವೇದಿಕೆಯಲ್ಲಿ, ಕಿಚ್ಚ ಸುದೀಪ್ ಅಧಿಕೃತವಾಗಿ ಲಾಂಚ್ ಮಾಡ್ತಾ ಇದ್ದಾರೆ. ಈ ಹೊಸ ಸೀರಿಯಲ್ನ ಟೈಟಲ್ ಏನು, ಯಾವಾಗಿನಿಂದ ಶುರುವಾಗುತ್ತೆ, ಪ್ರತಿದಿನ ಎಷ್ಟು ಗಂಟೆಗೆ ಪ್ರಸಾರವಾಗುತ್ತೆ ಅನ್ನೋ ಎಲ್ಲಾ ಡಿಟೈಲ್ಸ್ ರಿವೀಲ್ ಆಗಲಿದೆ.
ಈಟಿವಿ ಕನ್ನಡ ಹಾಗೂ ಕಲರ್ಸ್ ಕನ್ನಡದಲ್ಲಿ ಈ ಹಿಂದೆ ʻಮುಕ್ತʼ ಹಾಗೂ ʻಮುಕ್ತ..ಮುಕ್ತʼ ಸೀರಿಯಲ್ಗಳ ಮೂಲಕ ಅತಿ ಹೆಚ್ಚು ಟಿಆರ್ಪಿ ಗಳಿಸಿ ದಾಖಲೆಗಳನ್ನ ಬರೆದಿದ್ದ ಟಿಎನ್ ಸೀತಾರಾಮ್, ಕಲರ್ಸ್ ಸೂಪರ್ ವಾಹಿನಿಗೆ ʻಮಗಳು ಜಾನಕಿʼ ಅನ್ನೋ ಸೀರಿಯಲ್ ನೀಡಿದ್ರು. ಈಗ ಮತ್ತೆ ಸಿಎಸ್ಪಿ ಆಗಿ ಮರಳ್ತಾ ಇದ್ದಾರೆ ಟಿಎನ್ ಸೀತಾರಾಮ್. ಇನ್ನೊಂದು ವಿಶೇಷವೇನಂದ್ರೆ ಈ ಸೀರಿಯಲ್ ಅನ್ನೋ ಕೋಟಿ ಸಿನಿಮಾ ನಿರ್ದೇಶನ ಮಾಡಿದ್ದ, ಕಲರ್ಸ್ ಕನ್ನಡದ ಈ ಹಿಂದಿನ ಮುಖ್ಯಸ್ಥರಾಗಿದ್ದ ಪರಮೇಶ್ವರ್ ಗುಂಡ್ಕಲ್ ನಿರ್ಮಾಣ ಮಾಡ್ತಿದ್ದಾರೆ.