ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಸುಕರ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:49 ಗಂಟೆ, ರಾಹು ಕಾಲ ಮಧ್ಯಾಹ್ನ 02:09 ರಿಂದ 03:43, ಯಮಘಂಡ ಕಾಲ ಬೆಳಿಗ್ಗೆ 06:21 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:28 ರಿಂದ 11:02ರ ವರೆಗೆ.
ನಿತ್ಯ ಫಲ:
- ಮೇಷ: ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ನ ತರುವಂತಹ ಘಟನೆ ನಡೆಯಲಿದೆ. ಎಚ್ಚರ.
- ವೃಷಭ: ಹಲವು ದಿನಗಳಿಂದ ಮಾಡ ಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಲಿದೆ.
- ಮಿಥುನ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ, ಹಣ ವ್ಯರ್ಥ ಮಾಡದಿರಿ.
- ಕಟಕ: ಸಮಾಧಾನದಿಂದ ಕಾರ್ಯ ನಿರ್ವಹಿಸಿದರೆ ಜಯ ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ.
- ಸಿಂಹ: ಅತಿ ಅವಸರವೇ ಅಪಾಯಕ್ಕೆ ಕಾರಣ ಎಂಬುದು ನೆನಪಿರಲಿ. ಅನವಶ್ಯಕ ಮಾತುಕತೆ ಬೇಡ.
- ಕನ್ಯಾ: ಬೂದಿ ಮುಚ್ಚಿದ ಕೆಂಡದಂತೆ ನಿಮ್ಮ ಮೆಲೆ ಹಗೆ ಸಾಧಿಸಿದವರು ಕಾಯುತ್ತಿರುತ್ತಾರೆ. ಎಚ್ಚರ.
- ತುಲಾ: ಹೊಸ ಉದ್ಯೋಗ ನಿಮ್ಮ ಕೈ ಹಿಡಿಯಲಿದ್ದು, ಹೆಚ್ಚಿನ ಸಾಧನೆ ಸಾಧ್ಯವಿದೆ.
- ವೃಶ್ಚಿಕ: ದೂರದ ನಿಮ್ಮ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ.
- ಧನುಸ್ಸು: ನಿಮ್ಮ ಮಾತೇ ಎಲ್ಲೆಡೆಯೂ ನಡೆಯಬೇಕು ಎಂಬ ಹಠ ಬಿಟ್ಟು ವಿಶಾಲವಾಗಿ ಚಿಂತಿಸಿ.
- ಮಕರ: ದೂರ ಪ್ರಯಾಣ ಯೋಗ ನಿಮಗೆ ಕೂಡಿ ಬರಲಿದೆ. ಹೊಸ ಅನುಭವ ನಿಮ್ಮದಾಗಲಿದೆ.
- ಕುಂಭ: ಅನಾರೋಗ್ಯದ ಹಿನ್ನೆಲೆ ಮಾಡಬೇಕಾದ ಕೆಲಸ ಮಾಡಲಾಗದೆ ಕಷ್ಟ ಪಡುವಿರಿ.
- ಮೀನ: ಹಿರಿಯರ ಸಲಹೆಯಂತೆ ಸರಿಯಾದ ದಾರಿಯಲ್ಲಿ ನಡೆದು ಗುರಿ ಮುಟ್ಟಿ.