ರಾಜಮೌಳಿ ಚಿತ್ರಗಳ ರೇಂಜ್ ಗಿಲ್ಲ ಪುಷ್ಪ.. ಕರ್ನಾಟಕ ಥಿಯೇಟರ್ಸ್ ಖಾಲಿ ಖಾಲಿ..!
ಪುಷ್ಪ-2.. ವಿಶ್ವದಾದ್ಯಂತ ಸುಮಾರು 12 ಸಾವಿರ ಸ್ಕ್ರೀನ್ಸ್ ನಲ್ಲಿ ತೆರೆಕಂಡಿದೆ. ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ- ಫಹಾದ್ ಫಾಸಿಲ್ ನಟನೆಯ ಈ ಸಿನಿಮಾ ಮೊದಲ ಭಾಗದಿಂದಾಗಿ ಅತೀವ ನಿರೀಕ್ಷೆ ಮೂಡಿಸಿತ್ತು. ಆದ್ರೀಗ ರಿಲೀಸ್ ಬಳಿಕ ಅದರ ಅಸಲಿ ಬಂಡವಾಳ ಹೊರಬಿದ್ದಿದೆ. ರಿಲೀಸ್ ಗೂ ಮೊದಲೇ ಸಾವಿರ ಕೋಟಿ ಬ್ಯುಸಿನೆಸ್.. ಹಾಗಂತೆ.. ಹೀಗಂತೆ ಅಂತ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಲಾಗಿತ್ತು. ಆದ್ರೆ ಕಥೆಯಲ್ಲಿ ಮಜಾ ಇಲ್ಲ. ಕಲಾವಿದರ ಬೊಂಬಾಟ್ ಪರ್ಫಾಮೆನ್ಸ್ ನಿಂದ ತಕ್ಕಮಟ್ಟಿಗೆ ರುಚಿಸಲಿದೆ. ಇನ್ನು ಈ ಚಿತ್ರತಂಡ ಸೃಷ್ಠಿಸಿದ್ದ ಹಂಗಾಮ, ಹೈಪ್ ನೋಡಿ ಎಲ್ಲಾ ಕಡೆ ಡಿಸ್ಟ್ರಿಬ್ಯೂಟರ್ ಗಳು ನಾ ಮುಂದು ತಾ ಮುಂದು ಅಂತ ಬಂದು ಮುಗಿಬಿದ್ದು ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿಸಿದ್ದರು.
ನಮ್ಮ ಕರ್ನಾಟಕಕ್ಕೆ ಪುಷ್ಪ-2 ರೈಟ್ಸ್ ನ ತಂದಿದ್ದು ಬಳ್ಳಾರಿ ಮೂಲದ ಲಕ್ಷ್ಮೀಪತಿ ರೆಡ್ಡಿ. 31 ಕೋಟಿಗೆ ತಂದು 15 ಕೋಟಿ ಲಾಭ ಕೂಡ ಮಾಡಿಕೊಂಡಿದ್ದಾರೆ ಅನ್ನೋದು ಹಲವು ಮೂಲಗಳ ಮಾಹಿತಿ. ಆದ್ರೆ ಚಿತ್ರ ಕ್ರಿಯೇಟ್ ಮಾಡಿದ್ದ ಹೈಪ್ ನೋಡಿ ಏರಿಯಾ ಡಿಸ್ಟ್ರಿಬ್ಯೂಟರ್ಸ್ ಹಾಗೂ ಪ್ರದರ್ಶಕರು ದೊಡ್ಡ ಮೊತ್ತಕ್ಕೆ ಸಿನಿಮಾನ ಖರೀದಿಸಿ, ತೋರಿಸೋಕೆ ಮುಂದಾದ್ರು. ಅಸಲಿ ಮ್ಯಾಟರ್ ಏನಪ್ಪಾಂದ್ರೆ ಥಿಯೇಟರ್ ಒಳಗೆ ಬಂದು ಚಿತ್ರ ವೀಕ್ಷಿಸಿದ್ರೆ ನಿರೀಕ್ಷೆ ಹುಸಿಯಾಗಿದೆ. ಕಥೆ ಮಜಾ ಕೊಡ್ತಿಲ್ಲ. ಅಷ್ಟೇ ಯಾಕೆ ಸಿನಿಮಾ ಮೇಲಿನ ಅತೀವ ನಿರೀಕ್ಷೆಯಿಂದ ಅತಿಹೆಚ್ಚು ಸ್ಕ್ರೀನ್ಸ್ ನಲ್ಲಿ ಸಿನಿಮಾ ರಿಲೀಸ್ ಮಾಡಲಾಗಿದೆ. ಹಾಗಾಗಿ ಥಿಯೇಟರ್ ಗೆ ಬಂದು ನೋಡೋರ ಸಂಖ್ಯೆ ಕಡಿಮೆ ಆಗಿದೆ. ಸಿಂಗಲ್ ಸ್ಕ್ರೀನ್ ಗಳಲ್ಲಿ 150 ಮಂದಿ ಬಂದು ನೋಡಿದ್ರೆ ಹೆಚ್ಚೆಚ್ಚು ಎನ್ನಲಾಗ್ತಿದೆ. ಬುಕ್ ಮೈ ಶೋನಲ್ಲಿ ಗ್ರೀನ್ ತೋರಿಸೋ ಮೂಲಕ ಮಲ್ಟಿಪ್ಲೆಕ್ಸ್ ಗಳು ಕೂಡ ಖಾಲಿ ಖಾಲಿ. ಹೀಗಾಗಿ ಪ್ರದರ್ಶಕರು ಬಾಯಿ ಬಾಯಿ ಬಡ್ಕೊಳ್ಳುವಂತಾಗಿದೆ ಎನ್ನಲಾಗಿದೆ.
ಇನ್ನು ರಾಜಮೌಳಿಯ ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳ ರೇಂಜ್ ಗೆ ಇಲ್ಲ ಪುಷ್ಪ-2. ಸುಕುಮಾರ್ ಎಲ್ಲೋ ಒಂದು ಕಡೆ ಎಡವಿದ್ರಾ ಅನ್ನೋ ಮಾತುಗಳು ಕೂಡ ಕೇಳಿಬರ್ತಿವೆ. ಒಟ್ಟಾರೆ ಮಿಶ್ರ ಪ್ರತಿಕ್ರಿಯೆಗಳ ನಡುವೆ ಪುಷ್ಪ-2 ತಕ್ಕಮಟ್ಟಿಗೆ ಸೌಂಡ್ ಮಾಡ್ತಿದೆ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್